tamanvi
ಆರೋಗ್ಯ

ನೆಹರುನಗರದಲ್ಲಿ ಅತ್ಯಾಧುನಿಕ ಸ್ಥೈರ್ಯ ಫಿಸಿಯೋಕೇರ್ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರಿನ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯ ಅಂಬಿಕಾ ಸ್ಟಾಲ್ ಸಮೀಪ ಸ್ಥೈರ್ಯ ಫಿಸಿಯೋಕೇರ್ ಸೋಮವಾರ ಶುಭಾರಂಭಗೊಂಡಿತು.

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಸಂಸ್ಥೆಯನ್ನು ಉದ್ಘಾಟಿಸಿ, ಬೆನ್ನು ನೋವು, ಕುತ್ತಿಗೆ ನೋವು, ಕೀಲು ನೋವು, ನರ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳಿಗೆ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿರುವವರಿಗೆ ಪುತ್ತೂರಿನಲ್ಲಿ ‘ಸ್ಥೈರ್ಯ ಫಿಸಿಯೋಕೇರ್’ ಸೇವೆ ಲಭ್ಯವಿದೆ. ‘ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರವು ಅನುಭವಿ ಆರ್ಥೋಪೆಡಿಕ್ ಫಿಸಿಯೋಥೆರಪಿಸ್ಟ್ ಡಾ. ಗಾನ ಪಿಲಿಂಜ (BPT, MPT) ಅವರ ಮಾರ್ಗದರ್ಶನದಲ್ಲಿ ವಿವಿಧ ಫಿಸಿಯೋಥೆರಪಿ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸುತ್ತಿದೆ ಎಂದ ಅವರು, ಸಂಸ್ಥೆಗೆ ಶುಭಹಾರೈಸಿದರು.

ವಕೀಲರಾದ ಎನ್.ಕೆ. ಜಗನ್ನಿವಾಸ್ ರಾವ್, ಬಾಲಚಂದ್ರ, ಡಾ. ರಮೇಶ್ ರಾವ್, ರಾಧೇಶ್ಯಾಂ, ಡಾ. ಸಚಿನ್ ಉಪಸ್ಥಿತರಿದ್ದರು.

ವಿವಿಧ ಚಿಕಿತ್ಸಾ ಸೇವೆಗಳು

ಸ್ಥೈರ್ಯ ಫಿಸಿಯೋಕೇರ್ನಲ್ಲಿ ಆರ್ಥೋಪೆಡಿಕ್ ಫಿಸಿಯೋಥೆರಪಿ, ನರರೋಗ ಪುನರ್ವಸತಿ, ಕ್ರೀಡಾ ಗಾಯಗಳ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೂ ಮುನ್ನ ಹಾಗೂ ನಂತರದ ಫಿಸಿಯೋಥೆರಪಿ ಆರೈಕೆ ಮತ್ತು ವೃದ್ಧಾಪ್ಯ ಸಂಬಂಧಿತ ಚಲನೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿರುವವರಿಗೆ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡುವ ಸೌಲಭ್ಯವೂ ಇದೆ.

ಬೆನ್ನು ಹಾಗೂ ಕುತ್ತಿಗೆ ನೋವು, ಮಂಡಿ ಮತ್ತು ಭುಜದ ನೋವು, ಸಂಧಿವಾತ, ಸಯಾಟಿಕಾ, ಕೀಲುಗಳ ಬಿಗಿತ, ಪಾರ್ಶ್ವವಾಯು ನಂತರದ ಪುನರ್ವಸತಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಚಿಕಿತ್ಸಾ ವಿಧಾನಗಳನ್ನು ಅಳವಡಿಸಲಾಗುತ್ತದೆ. ಎಲೆಕ್ಟ್ರೋಥೆರಪಿ, ಮ್ಯಾನುವಲ್ ಥೆರಪಿ ಹಾಗೂ ಥೆರಪ್ಯೂಟಿಕ್ ವ್ಯಾಯಾಮ ಸೇರಿದಂತೆ ವಿವಿಧ ಫಿಸಿಯೋಥೆರಪಿ ವಿಧಾನಗಳ ಮೂಲಕ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 4ರಿಂದ 7.30ರವರೆಗೆ ಚಿಕಿತ್ಸೆಗೆ ಲಭ್ಯ. ಶನಿವಾರದಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಭಾನುವಾರ ಪೂರ್ವನಿಯೋಜಿತ ಅಪಾಯಿಂಟ್ಮೆಂಟ್ ಮೇರೆಗೆ ಚಿಕಿತ್ಸೆ ಲಭ್ಯವಿದೆ.

ಸಂಪರ್ಕ: 9380822834 ವೆಬ್ಸೈಟ್: www.sthairyaphysiocare.co.in


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts