tamanvi
ಅಪಘಾತ

ನದಿಗೆ ಉರುಳಿದ ಕಾರು – ಚಾಲಕ, 3 ವರ್ಷದ ಮಗುವಿನ ರಕ್ಷಣೆ ಮಾಡಿದ ಮೀನುಗಾರ!!

ಈ ಸುದ್ದಿಯನ್ನು ಶೇರ್ ಮಾಡಿ

ಕೊಡವೂರಿನ ಚೆನ್ನಂಗಡಿ ಬಳಿ ಕಾರೊಂದು ನದಿಗೆ ಉರುಳಿಬಿದ್ದ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರೊಂದು ನದಿಗೆ ಬೀಳುವುದನ್ನು ಗಮನಿಸಿದ ಸ್ಥಳೀಯ ಮೀನುಗಾರ ಗಣೇಶ್ ಕೂಡಲೇ ಯಾವುದೇ ವಿಳಂಬ ಮಾಡದೆ ನದಿಗೆ ಹಾರಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಕಾರಿನೊಳಗೆ ಸಿಲುಕಿಕೊಂಡಿದ್ದ ಚಾಲಕ ಹಾಗೂ ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ದಡಕ್ಕೆ ಕರೆತರುವಲ್ಲಿ ಅವರು ಯಶಸ್ವಿಯಾದರು.

ಘಟನೆಯ ವೇಳೆ ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿದ ಗಣೇಶ್ ಅವರ ತಕ್ಷಣದ ಕ್ರಮದಿಂದ ಎರಡು ಅಮೂಲ್ಯ ಜೀವಗಳು ಉಳಿದಿವೆ. ಅವರ ಸಾಹಸ ಹಾಗೂ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts