ಅಪಘಾತ

ಪುಣಚದಲ್ಲಿ ಅಪಘಾತ: ಗಂಭೀರ ಗಾಯಗೊಂಡ ಯುವಕನ ಚಿಕಿತ್ಸೆಗೆ ಬೇಕಿದೆ ನೆರವು!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುಣಚ: ಇಲ್ಲಿನ ಸರಳಿಕಾನದಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನ‌ ಚಿಕಿತ್ಸೆಗೆ ಮನೆಯವರು ನೆರವಿನ ಹಸ್ತ ಚಾಚಿದ್ದಾರೆ.

maithri

ಕೋಳಿ ಕೊಂಡೊಯ್ಯುತ್ತಿದ್ದ ವಾಹನ ಹಾಗೂ ಶಶಿತ್ ಅವರಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಶಿತ್ ಅವರ ಬಲ ಕಾಲಿನ ಎಲುಬು, ಸೊಂಟದ ಪಕ್ಕೆಲುಬು, ಎಡಕೈ ಎಲುಬು, ಬಲಗೈಯ ಎರಡು ಬೆರಳುಗಳು ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿದೆ.

ಶಸ್ತ್ರಚಿಕಿತ್ಸೆ ಹಾಗೂ ಮುಂದಿನ ಚಿಕಿತ್ಸೆಗೆ ಸುಮಾರು ₹6 ರಿಂದ ₹7 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟಕರವಾಗಿದ್ದು, ಸಹೃದಯರು ತಮ್ಮಿಂದಾದ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ನೆರವಿಗಾಗಿ ಬ್ಯಾಂಕ್ ವಿವರಗಳು:
ಹೆಸರು: Sowmya Shree S
ಖಾತೆ ಸಂಖ್ಯೆ: 64182038892
IFSC Code: SBIN0004270

ಸಹಾಯ ಮಾಡಲು ಇಚ್ಛಿಸುವವರು ಮೇಲ್ಕಂಡ ಖಾತೆಗೆ ತಮ್ಮ ನೆರವನ್ನು ಕಳುಹಿಸಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts