ಅಪಘಾತ

ಕೋಡಿಂಬಾಡಿ ಅರ್ಬಿ ಬಳಿ ಅಪಘಾತ: ಚಾಲಕ ಚೆಲುವಮ್ಮನಕಟ್ಟೆ ನಿವಾಸಿ ಶಿವಪ್ರಸಾದ್ ನಾಯಕ್ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತೆಂಗಿನಕಾಯಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರಿನ ಕೋಡಿಂಬಾಡಿ ಅರ್ಬಿ ಸಮೀಪ ನಡೆದಿದೆ.

ಮೃತ ಚಾಲಕನನ್ನು ಪುತ್ತೂರಿನ ಬನ್ನೂರಿನ ಚೆಲುವಮ್ಮನಕಟ್ಟೆ ನಿವಾಸಿ ಶಿವಪ್ರಸಾದ್ ನಾಯಕ್ ಎಂದು ಗುರುತಿಸಲಾಗಿದೆ.

ತೆಂಗಿನಕಾಯಿ ಲೋಡ್ ಮಾಡಿಕೊಂಡು ಅರ್ಬಿ ಬಳಿ ಏರುಮಾರ್ಗದಲ್ಲಿ ವಾಹನವನ್ನು ತಿರುಗಿಸುವ ಸಂದರ್ಭದಲ್ಲಿ ಪಿಕಪ್‌ನ ಚಕ್ರವೊಂದು ದಿಣ್ಣೆಯ ಮೇಲೇರಿದೆ ಎನ್ನಲಾಗಿದೆ. ಈ ವೇಳೆ ಗಾಬರಿಗೊಂಡ ಚಾಲಕ ಶಿವಪ್ರಸಾದ್ ನಾಯಕ್ ವಾಹನದಿಂದ ಇಳಿಯಲು ಮುಂದಾಗಿದ್ದು, ಅಷ್ಟರಲ್ಲಿ ಪಿಕಪ್ ವಾಹನ ಅವರ ಮೇಲೆಯೇ ಪಲ್ಟಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರು!!

ಕಣ್ಣೂರು: ಕೊಟ್ಟಿಯೂರಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ…