ಸುಳ್ಯ: ಇಲ್ಲಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್ ಶಾಕ್’ಗೆ ಈರ್ವರು ಯುವಕರು ಮೃತಪಟ್ಟ ದಾರುಣ ಘಟನೆ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಮೃತ ಯುವಕರನ್ನು ಬೊಮ್ಮೆಟ್ಟಿಯ ರಮೇಶ್ ಯಾನೆ ಗಣೇಶ್ ಹಾಗೂ ಭರತ್ ಎಂದು ಗುರುತಿಸಲಾಗಿದೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಆಘಾತದ ಬಗ್ಗೆ ಹಲವು ಸುದ್ದಿಗಳು ಈಗಾಗಲೇ ಹರಿದಾಡುತ್ತಿದ್ದು, ಇನ್ನು ನಿಖರವಾದ ಮಾಹಿತಿ ಲಭ್ಯವಾಗಬೇಕಿದೆ.

























