ಕ್ರೀಡೆ

ಬೆಂಗಳೂರಿನಲ್ಲಿ ನಡೆಯುವ 5ನೇ ಮಿನಿ ಒಲಿಂಪಿಕ್’ಗೆ ತೆರಳಿದ ಜಿಲ್ಲೆಯ ಬಾಲಕಿಯರ ತಂಡ | ಸಮವಸ್ತ್ರ ವಿತರಿಸಿ, ಶುಭಹಾರೈಸಿ ಕಳುಹಿಸಿದ ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಪುತ್ತೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನ. 14ರಿಂದ 17ರವರೆಗೆ ನಡೆಯಲಿರುವ 5ನೇ ಮಿನಿ ಒಲಿಂಪಿಕ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 14 ವರ್ಷದ ಬಾಲಕಿಯರ ವಾಲಿಬಾಲ್ ತಂಡ ಭಾಗವಹಿಸಲಿದ್ದು, ಅವರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ದರ್ಬೆ ಆಫೀಸರ್ಸ್ ಕ್ಲಬ್ ನಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ನೇತೃತ್ವದಲ್ಲಿ ಜಿಲ್ಲೆಯ ಬಾಲಕಿಯರ ತಂಡವನ್ನು ಆಯ್ಕೆ ಮಾಡಿದ್ದು, ಸಮವಸ್ತ್ರ ವಿತರಿಸಿ ಕಳುಹಿಸಿಕೊಡಲಾಯಿತು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೀಪಾವಳಿ ಹಬ್ಬದಂದು ನಮ್ಮ ಜಿಲ್ಲೆಯ ಬಾಲಕಿಯರ ವಾಲಿಬಾಲ್ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಬಾಲಕಿಯರಿಗೆ ಸಮವಸ್ತ್ರ ನೀಡಿದ್ದು, ಅವರ ಖರ್ಚು – ವೆಚ್ಚಗಳ ಉಸ್ತುವಾರಿಯನ್ನು ಅಸೋಸಿಯೇಶನ್ ನೋಡಿಕೊಂಡಿರುವುದು ಶ್ಲಾಘನೀಯ ಕಾರ್ಯ. ಬಾಲಕಿಯರ ಪ್ರಯಾಣ ಭತ್ತೆ, ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಪಂದ್ಯದ ವ್ಯವಸ್ಥೆಗಳನ್ನು ಸರಕಾರವೇ ಭರಿಸಲಿದೆ ಎಂದ ಅವರು, ತಂಡಕ್ಕೆ ಶುಭಕೋರಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಪ್ರಮೋದ್ ಕುಮಾರ್, ​ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್‌ನಿಂದ ದೂರಾಗಿ ಕ್ರೀಡೆಯತ್ತ ಒಲವು ತೋರಿರುವುದು ಅತ್ಯಂತ ಸಂತೋಷದ ವಿಷಯ. ​ಸೋಲು-ಗೆಲುವು ಕ್ರೀಡೆಯ ಸಹಜ ಸೋತವರಿಗೆ ನೂರು ಬಾಗಿಲುಗಳು ತೆರೆದಿರುತ್ತವೆ. ಗೆದ್ದವರಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಮಕ್ಕಳು ಇಂದು ನಗುತ್ತಿರುವ ಹಾಗೆ ಗೆದ್ದು ಬರುವಾಗಲೂ ಇದೇ ರೀತಿ ನಗು ನಿಮ್ಮದಾಗಿರಲಿ ಮತ್ತು ಈ ಚಿಕ್ಕ ವಯಸ್ಸಿನಲ್ಲಿ ನೀವು ಕ್ರೀಡೆಯಲ್ಲಿ ತೋರಿಸುವ ಆಸಕ್ತಿ ನನಗೆ ಬಹಳ ಸಂತೋಷ ತಂದಿದೆ ಎಂದು ಶುಭಹಾರೈಸಿದರು.

ಮೌಂಟನ್ ಸ್ಕೂಲ್ ಸ್ಥಾಪಕ ಜನಾಬ್ ಕೆ.ಪಿ. ಅಹಮದ್ ಹಾಜಿ ಮಾತನಾಡಿ, ​ಈ ಅಸೋಸಿಯೇಷನ್ ಇನ್ನಷ್ಟು ಬೆಳೆದು ಹತ್ತಾರು ಮಕ್ಕಳ ಬಾಳಿನಲ್ಲಿ ಬೆಳಕು ತುಂಬಲಿ. ಕ್ರೀಡೆಗೆ ಮಕ್ಕಳನ್ನು ಕಳುಹಿಸಿಕೊಟ್ಟ ತಂದೆ-ತಾಯಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಆಫೀಸರ್ಸ್ ಕ್ಲಬ್ ಉಪಾಧ್ಯಕ್ಷ ಶಿವರಾಮ ಆಳ್ವ ಮಾತನಾಡಿ, ​ಪಾಳುಬಿದ್ದಿದ್ದ ಹಾಗೂ ಹಿಂದೆ ಟೆನ್ನಿಸ್ ಆಡುತ್ತಿದ್ದ ಈ ಕ್ರೀಡಾಂಗಣವನ್ನು ಈಗ ವಾಲಿಬಾಲ್ ಮೂಲಕ ಮತ್ತೆ ಬೆಳಕಿಗೆ ತರಲಾಗಿದೆ. ಇಲ್ಲಿ ಆಡುವ ಮಕ್ಕಳು ವಿಜಯಶಾಲಿಗಳಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ​ಮಕ್ಕಳು ಹಿರಿಯರಿಗೆ ಹೂವು ನೀಡುವಾಗ ತಲೆಬಾಗಿ ಪಾದ ಸ್ಪರ್ಶಿಸುವ ಸಂಸ್ಕೃತಿ ಮತ್ತು ನಮ್ಮ ಜಿಲ್ಲೆಯ ಸಂಸ್ಕೃತಿ. ಇಂತಹ ಸಂಸ್ಕೃತಿ ಇಂದಿಗೂ ಉಳಿದಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ವಿನಮ್ರತೆ ಮತ್ತು ತಲೆಬಾಗಿ ನಡೆಯುವವರು ಎಂದಿಗೂ ಸೋಲುವುದಿಲ್ಲ ಎಂದರು.

ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಮಾತನಾಡಿ, ​ಇಬ್ರಾಹಿಂ ಗೋಳಿಕಟ್ಟೆ ಅವರು ಕೇವಲ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೆ, ಕ್ರೀಡಾಕ್ಷೇತ್ರದಲ್ಲೂ ರಾಜ್ಯಮಟ್ಟದ ನಾಯಕರಾಗಿರುವುದು ತಮಗೆ ಹೆಮ್ಮೆ ತಂದಿದೆ ಎಂದರು.

​ ಪುತ್ತೂರು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಜನಾಬ್ ಅಬ್ದುಲ್ ರಹಮಾನ್ ಆಜಾದ್ ದರ್ಬೆ ಮಾತನಾಡಿ, ​ಇಬ್ರಾಹಿಂ ಅವರು ಯಾವ ಕೆಲಸವನ್ನೇ ಕೈಗೆತ್ತಿಕೊಂಡರೂ ಅದನ್ನು ಅಪೂರ್ಣವಾಗಿ ಬಿಡದೆ, ಸಂಪೂರ್ಣ ಯಶಸ್ಸಿನೊಂದಿಗೆ ಮುಗಿಸುವ ಛಲಗಾರರು ಎಂದು ಪ್ರಶಂಸಿಸಿದರು.

ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಶುಭ ಸಂದೇಶ ಕಳುಹಿಸಿದ್ದರು.

ಮಿತ್ರವೃಂದ ವಾಲಿಬಾಲ್ ಪುತ್ತೂರು ಅಧ್ಯಕ್ಷ ಪಿ.ವಿ. ಕೃಷ್ಣನ್, ರಾಷ್ಟ್ರಮಟ್ಟದ ತರಬೇತಿದಾರ ಪಿ ವಿ ನಾರಾಯಣನ್, ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ತರಬೇತಿದಾರ ಹಾಗೂ ಜೊತೆ ಕಾರ್ಯದರ್ಶಿ ಹಮೀದ್ ಸಹಜ, ರಾಷ್ಟ್ರಮಟ್ಟದ ಆಟಗಾರರಾದ ಗಣೇಶ್ ರೈ, ಹೇಮಾ, ಸಾಂದೀಪನಿ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಅಸೋಸಿಯೇಶನ್ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಕೋಶಾಧಿಕಾರಿ ಮನೋಜ್ ನೆಲ್ಯಾಡಿ. ಶ್ರದ್ಧಾ ಶೆಟ್ಟಿ, ಅಶೋಕ್ ಮಣಿಯಾಣಿ, ಸಿನಾನ್ ದರ್ಬೆ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಸ್ವಾಗತಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…