ಜಾಲ್ಸೂರು: ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಇವರ ಸಹಯೋಗದಲ್ಲಿ ನಡೆದ ಸುಳ್ಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಾಲ್ಸೂರು ವಿನೋಭಾನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ಹಲವು ವೈಯಕ್ತಿಕ ಹಾಗೂ ತಂಡದ ವಿಭಾಗಗಳಲ್ಲಿ ಪದಕಗಳನ್ನು ಪಡೆದುಕೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಅನ್ವೀಶ್ 400 ಮೀ. ಓಟ ಹಾಗೂ 400 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ, 4×400 ಮೀ. ರಿಲೇಯಲ್ಲಿ ಪ್ರಥಮ ಹಾಗೂ 4×100 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಶಮೀತ್ ಜಿ.ಜೆ. ಹೈಜಂಪ್‌ನಲ್ಲಿ ಪ್ರಥಮ ಹಾಗೂ ಟ್ರಿಪಲ್ ಜಂಪ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ದೀಪಕ್ ಲಾಂಗ್ ಜಂಪ್ ಹಾಗೂ 4×400 ಮೀ. ರಿಲೇಯಲ್ಲಿ ಪ್ರಥಮ, 400 ಮೀ. ಹರ್ಡಲ್ಸ್‌ನಲ್ಲಿ ದ್ವಿತೀಯ ಹಾಗೂ ಹೈಜಂಪ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲೋಹಿತ್ ಕುಮಾರ್ ಎಸ್. 3000 ಮೀ. ಓಟ ಮತ್ತು ವಾಕ್ ರೇಸ್‌ನಲ್ಲಿ ದ್ವಿತೀಯ, 4×400 ಮೀ. ರಿಲೇಯಲ್ಲಿ ಪ್ರಥಮ ಹಾಗೂ 4×100 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಮನ್ವಿತ್ ಕೆ.ಆರ್. 200 ಮೀ. ಓಟ ಹಾಗೂ 4×100 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದರೆ, ತರುಣ್ ರಾಜ್ ಜಾವೆಲಿನ್ ಎಸೆತ ಹಾಗೂ 4×100 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ ಟ್ರಿಪಲ್ ಜಂಪ್ ಹಾಗೂ 400 ಮೀ. ಓಟದಲ್ಲಿ ಪ್ರಥಮ, ಲಾಂಗ್ ಜಂಪ್‌ನಲ್ಲಿ ತೃತೀಯ ಹಾಗೂ 4×400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹೇಮನ್ಯ ಟಿ.ಕೆ. 800 ಮೀ. ಓಟ ಹಾಗೂ 4×400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ದೀಕ್ಷಿತಾ ಎಚ್. ಮತ್ತು ವೈಷ್ಣವಿ ಸಿ. ರಾವ್ 4×400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿನಂದನ್ 200 ಮೀ. ಓಟದಲ್ಲಿ ಪ್ರಥಮ ಹಾಗೂ 600 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಆಶಿಶ್ ಪಿ.ಜೆ. ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದ ಕ್ರೀಡಾಪಟುಗಳ ಸಾಧನೆಗೆ ತರಬೇತುದಾರರಾದ ಸುಮಿತಾ, ಆಡಳಿತ ಮಂಡಳಿ, ಪೋಷಕ ವೃಂದ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.























