tamanvi
ಕ್ರೀಡೆ

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಶಿಫ್ಟ್!! ಹಿಂದಿನ ವರ್ಷದ ರಾದ್ಧಾಂತ ಶಿಫ್ಟಿಗೆ ಕಾರಣವಾಯ್ತೇ: ಹೇಳಿಕೆ ನೀಡಿದ ಡಿಕೆಶಿ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL Season 2026) ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಶಿಫ್ಟ್ ಮಾಡಲಾಗಿದೆ.

maithri

ಅಂದ ಹಾಗೇ, ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಫೈನಲ್ ಪಂದ್ಯಾಟವನ್ನು ಸಾಮಾನ್ಯವಾಗಿ ಆಯೋಜಿಸಲಾಗುತ್ತದೆ. ಆದ್ದರಿಂದ ಈ ಬಾರಿ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಬೇಕಿತ್ತು. ಹಿಂದಿನ ವರ್ಷ ಆರ್.ಸಿ.ಬಿ. ಫೈನಲ್ ಪಂದ್ಯದಲ್ಲಿ ಗೆದ್ದು ಕಪ್ ತನ್ನದಾಗಿಸಿಕೊಂಡಿತ್ತು. ಆ ಸಂದರ್ಭ ದೊಡ್ಡ ರಾದ್ಧಾಂತ ಆಗಿರುವುದನ್ನು ನೆನಪಿಸಿಕೊಳ್ಳಬಹುದು.

ಇದೀಗ ಆರ್.ಸಿ.ಬಿ. ಫೈನಲ್ ಪಂದ್ಯದ ಕಾದಾಟವನ್ನು ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಮಾತ್ರವಲ್ಲ, ಇದೇ ಕಾರಣಕ್ಕೆ ಫೈನಲ್ ಪಂದ್ಯಾಟವನ್ನು ಶಿಫ್ಟ್ ಮಾಡಲಾಗಿದೆಯೇ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಶಾಸಕರಿಗೆ ಐಪಿಎಲ್ ಟಿಕೆಟಿಗೂ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಬೇರೆ ಕಡೆ ಶೇಕಡಾ 50ರಷ್ಟು ಸೀಟ್ ಕೊಡ್ತಾರೆ. ಅವರೇನೋ ಇನ್’ಫ್ಲೂಯೆನ್ಸ್ ಮಾಡಿ ಗುಜರಾತಿಗೆ ಸ್ಥಳಾಂತರಿಸಿದ್ದಾರೆ. ದೊಡ್ಡ ಸ್ಟೇಡಿಯಂನಲ್ಲಿ 1 ಲಕ್ಷ ಜನ ಸೇರಬಹುದು ಅಂತ ಮಾಡಿರಬಹುದು ಅಷ್ಟೇ. ಟಿಕೆಟಿಗೂ ಅದಕ್ಕೂ ಸಂಬಂಧ ಇಲ್ಲ. ಯಾರು ಹೇಳಿದ್ದು ಟಿಕೆಟ್ ವಿಚಾರವಾಗಿ ಶಿಫ್ಟ್ ಮಾಡ್ತಿದ್ದಾರೆ ಅಂತ? ಬಿಸಿಸಿಐ ಅವರು ಹೇಳಿಕೆ ಕೊಡಲಿ ಅವರಿಗೆ ಆಮೇಲೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕ್ರೀಡೆಯೊಂದಿಗೆ ಭಾರತೀಯತೆ ಬೆಳೆಸಿಕೊಳ್ಳಿ: ಸುಬ್ರಮಣ್ಯ ನಟ್ಟೋಜ | ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜೊತೆಗೆ ಅನೇಕ ಅನೇಕ ಅವಕಾಶಗಳು ವಿದ್ಯಾರ್ಥಿಗಳ…

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…