tamanvi
ಕ್ರೀಡೆ

ಭಾರಿ ಗಾಳಿಗೆ ಕುಸಿದ ತಾಲೂಕು ಕ್ರೀಡಾಂಗಣ ಗ್ಯಾಲರಿಯ ಶೀಟ್!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸೋಮವಾರ ಸಂಜೆಯ ಭಾರಿ ಗಾಳಿ – ಮಳೆಗೆ ಪುತ್ತೂರು ತಾಲೂಕು ಕ್ರೀಡಾಂಗಣದ ಗ್ಯಾಲರಿಯ ಶೀಟ್ ಜಗ್ಗಿದೆ.

maithri

ತಾಲೂಕು ಕ್ರೀಡಾಂಗಣದ ವೇದಿಕೆ ಎರಡೂ ಬದಿಯೂ ಗ್ಯಾಲರಿಯ ವ್ಯವಸ್ಥೆ ಇದೆ. ಇದರಲ್ಲಿ ವೇದಿಕೆಯ ಎಡ ಬದಿಯ ಶೀಟ್ ಗಾಳಿಯ ಹೊಡೆತಕ್ಕೆ ಶೀಟಿನ ಒಂದು ಭಾಗ ಗ್ಯಾಲರಿಯ ಮೇಲೆ ಬಿದ್ದಿದೆ. ಗಾಳಿಯ ರಭಸಕ್ಕೆ ಶೀಟಿನ ಜೊತೆಗೆ ಕಬ್ಬಿಣದ ಫೌಂಡೇಷನ್ ಕೂಡ ಕಿತ್ತು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಜನ ಸೇವಾ ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಅವರು, ಭಾರಿ ಗಾಳಿ ಮಳೆಗೆ ಶೀಟ್ ಕುಸಿದಿದೆ. ಸುಮಾರು 1.5 – 2 ಲಕ್ಷ ರೂ. ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಮಂಗಳವಾರ ಇಂಜಿನೀಯರ್ ಭೇಟಿ ನೀಡಲಿದ್ದಾರೆ. ತಕ್ಷಣದಲ್ಲೇ ಶೀಟನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…