ಕ್ರೀಡೆ

ಚದುರಂಗ ಸ್ಪರ್ಧೆ: ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ  ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

ambika

14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ದರ್ಬೆಯ ನಿವಾಸಿ ಕೆ ಜಿ ಮುರಳೀಧರ ಮತ್ತು ಕೆ ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ ಎಂ ಶಮಿತ ಭಟ್ ಹಾಗೂ  ಪಡೀಲ್ ನ ನಿವಾಸಿ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್, ಸಂಪ್ಯದ ನಿವಾಸಿ ರವಿಕುಮಾರ ಕೆ ಮತ್ತು ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ ಆರ್ ಪ್ರಥಮ ಸ್ಥಾನವನ್ನು ಗಳಿಸಿ, ಮಧ್ಯ ಪ್ರದೇಶದಲ್ಲಿ ನಡೆಯಲಿರುವ ಎಸ್ ಜಿ  ಎಫ್ ಐ ( ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ  ನೆಕ್ಕಿಲಾಡಿಯ ನಿವಾಸಿ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್  ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ನಿವಾಸಿ ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ನಿವಾಸಿ ಶ್ರೀನಿವಾಸ ಮಯ್ಯ ಡಿ  ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ ಹಾಗೂ ಕಲ್ಲಾರೆಯ ನಿವಾಸಿ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…