Gl harusha
ಕ್ರೀಡೆದೇಶ

ಭಾರತಕ್ಕೆ ನಿರಾಸೆಯ ಛಾಯೆ ಮೂಡಿಸಿದ ಕಾಮನ್ವೆಲ್ತ್ ಕ್ರೀಡಾಕೂಟ!! ಕ್ರಿಕೆಟ್, ಕುಸ್ತಿ ಸೇರಿದಂತೆ ಈ 9 ಆಟಗಳಿಗೆ ಇಲ್ಲ ಅವಕಾಶ!!

ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್, ಹಾಕಿ ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಹಾಗೂ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ತೆಗೆದುಹಾಕಲಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್, ಹಾಕಿ ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಹಾಗೂ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ತೆಗೆದುಹಾಕಲಾಗಿದೆ. ಹಣಕಾಸು ವಿಚಾರವಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಸುಮಾರು 9 ಕ್ರೀಡೆಗಳಿಗೆ ಗೇಟ್‌ಪಾಸ್ ನೀಡಲಾಗಿದೆ. ಹೋಸ್ಟಿಂಗ್ ಅಧಿಕಾರ ಹೊಂದಿರುವ ಸ್ಕಾಟ್ಲಂಡ್ ರಾಷ್ಟ್ರವು ವೆಚ್ಚ ಕಡಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ. ಇದರಿಂದಾಗಿ ಗೇಮ್ಸ್‌ನಲ್ಲಿ ಭಾರತದ ಪದಕದ ನಿರೀಕ್ಷೆಗೆ ತೀವ್ರ ಹಿನ್ನಡೆಯಾಗಿದೆ.

srk ladders
Pashupathi
Muliya

ಭಾರತವು ಈ ಹಿಂದಿನ ಆವೃತ್ತಿಯ ಗೇಮ್ಸ್‌ಗಳಲ್ಲಿ ಈ ಐದು ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನು ಜಯಿಸಿತ್ತು. 4 ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಿಂದ ಕೈಬಿಡಲಾಗಿದ್ದ ಶೂಟಿಂಗ್ ಕ್ರೀಡೆ ಈ ಬಾರಿ ಮರಳುವ ನಿರೀಕ್ಷೆ ಇರಲಿಲ್ಲ.

ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಭಾರತ ಪ್ರಾಬಲ್ಯ ಹೊಂದಿರುವ ಹಲವು ಕ್ರೀಡೆಗಳನ್ನು ತೆಗೆದಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಭಾರತದ ವಿವಿಧ ಕ್ರೀಡೆಯ ಅಟಗಾರರು ಮತ್ತು ಕ್ರೀಡಾ ಫೆಡರೇಷನ್‌ಗಳು ಬೇಸರ ವ್ಯಕ್ತಪಡಿಸಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts