ವಿದೇಶ

ಅಮೆರಿಕದಲ್ಲಿ ದೀಪಾವಳಿಯಂದು ಫೆಡರಲ್ ರಜಾದಿನ: ವಿಧೇಯಕ ಮರುಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೀಪಾವಳಿಯನ್ನು ಅಧಿಕೃತ ‘ಫೆಡರಲ್ ರಜಾದಿನ’ ಎಂದು ಘೋಷಿಸುವಂತೆ ಕೋರುವ ಪ್ರಮುಖ ವಿಧೇಯಕವನ್ನು ಅಮೆರಿಕದ ಕಾಂಗ್ರೆಸ್‌ನಲ್ಲಿ (ಸಂಸತ್ತು) ಮರುಮಂಡಿಸಲಾಗಿದೆ.

ಅಮೆರಿಕ ಸಂಸದೆ ಗ್ರೇಸ್ ಮೆಂಗ್ ಅವರ ನೇತೃತ್ವದಲ್ಲಿ 2023ರಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದ್ದ ‘ದೀಪಾವಳಿ ಕಾಯ್ದೆ’ ವಿಧೇಯಕವನ್ನು 3 ವರ್ಷಗಳ ನಂತರ 19 ಸಂಸದರ ಬೆಂಬಲದೊಂದಿಗೆ ಮತ್ತೆ ಮಂಡಿಸಲಾಗಿದೆ.

ಸಂಸದೆ ಕ್ಯಾರೋಲಿನ್ ಬಿ. ಮಲೋನಿ ಅವರ ನೇತೃತ್ವದಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದ್ದು, ದೀಪಾವಳಿಯನ್ನು ಅಮೆರಿಕ ಸರ್ಕಾರ ಗುರುತಿಸುವ ಅಧಿಕೃತ ಫೆಡರಲ್ ರಜಾದಿನಗಳ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಇದು ಒಳಗೊಂಡಿದೆ. ಅಮೆರಿಕದಲ್ಲಿ ಲಕ್ಷಾಂತರ ಭಾರತೀಯ ಮೂಲದ ಜನರು, ಹಿಂದೂ, ಸಿಖ್, ಜೈನ್ ಹಾಗೂ ಬೌದ್ಧ ಸಮುದಾಯದವರು ವಾಸಿಸುತ್ತಿದ್ದು, ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸುವುದರಿಂದ ಅವರ ಸಾಂಸ್ಕೃತಿಕ ಪರಂಪರೆಗೆ ಸೂಕ್ತ ಗೌರವ ದೊರೆತಂತಾಗುತ್ತದೆ ಎಂದು ಸಂಸದರು ಪ್ರತಿಪಾದಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಚೀನಾ! ಫಹಲ್ಗಾಮ್ ದಾಳಿಯ ಹೊಣೆ ಹೊತ್ತ ಬೆನ್ನಲ್ಲೇ ಪಾಕ್ ಜೊತೆ ಚೀನಾ ಮಾತುಕತೆ!

ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ ಪಕ್ಕದ ರಾಷ್ಟ್ರ ಚೀನಾ, ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ.…