tamanvi
ವಿದೇಶ

ಹಾರ್ಮುಜ್ ದಾಟಿದ ತೈಲ ಟ್ಯಾಂಕರ್!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಗಲ್ಫ್ ಪ್ರದೇಶದಲ್ಲಿ ಇರಾನ್ ಯುದ್ಧದ ಪರಿಣಾಮ ಸಮುದ್ರದಲ್ಲಿ ಸರಕು ಸಾಗಣೆ ಅಸ್ತವ್ಯಸ್ತಗೊಂಡಿರುವ ನಡುವೆಯೂ ಒಂದು ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿ ಯುನೈಟೆಡ್ ಅರಬ್ ಎಮಿರೇಟ್ಸ್ ಬಂದರಿನತ್ತ ಸಾಗಿರುವುದು ವರದಿಯಾಗಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮೂಲಗಳು ಮತ್ತು ಹಡಗು ಟ್ರ್ಯಾಕಿಂಗ್ ದತ್ತಾಂಶದಿಂದ ಮಾಹಿತಿ ಬಹಿರಂಗವಾಗಿದೆ. ಮಾರ್ಚ್ 2 ತಡರಾತ್ರಿ ಪೋಲಾ ಎಂಬ ತೈಲ ಟ್ಯಾಂಕರ್ ಜಲಸಂಧಿಯನ್ನು ಸಮೀಪಿಸಿದಾಗ ತನ್ನ ಎಐಎಸ್ ಟ್ರ್ಯಾಕರ್ ಅನ್ನು ಆಫ್ ಮಾಡಿತ್ತು. ಬಳಿಕ ಮಂಗಳವಾರ ಅದು ಅಬುಧಾಬಿ ಸಮೀಪದಲ್ಲಿ ಮತ್ತೆ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ಅಬುಧಾಬಿಯ ಮುರ್ಬನ್ ಕಚ್ಚಾ ತೈಲವನ್ನು ಥೈಲ್ಯಾಂಡ್‌ಗೆ ರಫ್ತು ಮಾಡಲು ಈ ಟ್ಯಾಂಕರ್ ಜೆಬೆಲ್ ಧನ್ನಾ ಬಂದರಿಗೆ ಸಾಗುತ್ತಿದೆ ಎಂದು ಎರಡು ಉದ್ಯಮದ ಮೂಲಗಳು ಮಾಹಿತಿ ನೀಡಿವೆ.

maithri

ಅಮೆರಿಕ ಮತ್ತು ಇಸ್ರೇಲ್ ಜೊತೆ ಟೆಹ್ರಾನ್‌ನ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆಗೆ ಇರಾನ್ ನೀಡಿರುವ ಬೆದರಿಕೆಗಳ ಪರಿಣಾಮವಾಗಿ ಗಲ್ಫ್ ಪ್ರದೇಶದಲ್ಲಿ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಖತರ್‌ ನಿಂದ ಇರಾಕ್‌ವರೆಗೆ ಇರುವ ಕೆಲವು ದೇಶಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮುರಿದುಬಿತ್ತು ಅಮೆರಿಕ – ಇರಾನ್ ಶಾಂತಿ ಒಪ್ಪಂದ’? ಇರಾನ್ ಮುಂದಿರುವುದು ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಕೊಲ್ಲಿ ರಾಷ್ಟ್ರಗಳ ಯುದ್ಧ ಇಸ್ಲಾಮಾಬಾದ್ ಶಾಂತಿ ಒಪ್ಪಂದದಿಂದ ತಹಬದಿಗೆ ಬಂತು ಎಂದು ವಿಶ್ವವೇ…