ಅಪಘಾತ

ಹಿರೇಬಂಡಾಡಿಯಲ್ಲಿ ಬೈಕ್ ಅಪಘಾತ: ಚಿಕಿತ್ಸೆ ಫಲಿಸದೇ ಸವಾರ ಲಿಖಿತ್ ರೈ ಮೃತ್ಯು..!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಉಪ್ಪಿನಂಗಡಿ-ಕೊಯಿಲಾ ಹಿರೇಬಂಡಾಡಿ ಶಾಖೆಪುರದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ 23 ರಂದು ಮೃತಪಟ್ಟಿದ್ದಾರೆ.

chennai-shopping
maithri

ಮೃತರನ್ನು ರವೀಂದ್ರ ರೈ ಮುರದಮೇಲು ಅವರ ಪುತ್ರ ಲಿಖಿತ್ ರೈ ಎಂದು ಗುರುತಿಸಲಾಗಿದೆ.

ಏಪ್ರಿಲ್ 22ರಂದು ಸಂಜೆ ಲಿಖಿತ್ ರೈ ಅವರು ಕೆಎ 21 ಇಸಿ 7292 ಸಂಖ್ಯೆಯ ಬೈಕ್ ನಲ್ಲಿ ಉಪ್ಪಿನಂಗಡಿ-ಕೊಯಿಲಾ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಹಿರೇಬಂಡಾಡಿ ಶಾಖೆಪುರ ಬಳಿ ತಲುಪಿದಾಗ ಬೈಕ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ನಿವಾಸಿ ದಯಾನಂದ ಹಾಗೂ ಸಾರ್ವಜನಿಕರು ತಕ್ಷಣವೇ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಾಯಗಳ ತೀವ್ರತೆಯಿಂದಾಗಿ ಅವರು ಚಿಕಿತ್ಸೆಗೂ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹಿರೇಬಂಡಾಡಿ ನಿವಾಸಿ ದಯಾನಂದ ಅವರ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಕ್ರ.ಸಂ. 71/2026, ಬಿಎನ್‌ಎಸ್ ಕಲಂ 281 ಮತ್ತು 125(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts