tamanvi
ಅಪಘಾತ

ಮಿತ್ತೂರು: ಪಿಕಪ್ – ಆ್ಯಕ್ಟೀವಾ ಡಿಕ್ಕಿ! ಪಿಕಪ್ ನಂಬರ್ ಪ್ಲೇಟಿಗೆ ಕಪ್ಪು ಬಣ್ಣ??

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಿತ್ತೂರು ಸಮೀಪ ಪಿಕಪ್ ಹಾಗೂ ಆ್ಯಕ್ಟೀವಾ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಡೆದಿದೆ.

maithri

ಮಿತ್ತೂರು ರೈಲ್ವೇ ಬ್ರಿಡ್ಜಿನಿಂದ ಕೊಂಚ ದೂರದಲ್ಲಿ ಘಟನೆ ನಡೆದಿದೆ. ಗಾಯಾಳು ಮೂಲತಃ ಮುಕ್ವೆ ಮಣಿಯ ನಿವಾಸಿಯಾಗಿದ್ದು, ಪ್ರಸ್ತುತ ಕಬಕದಲ್ಲಿ ವಾಸವಿದ್ದ ಸಲೀಂ (52) ಗಾಯಗೊಂಡವರು. ಅವರು ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸಲೀಂ ಅವರು ಮಿತ್ತೂರಿನ ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಬಕ ಕಡೆಯಿಂದ ಮಿತ್ತೂರು ಕಡೆಗೆ ಅತಿವೇಗದಲ್ಲಿ ಬಂದ ಮಹಿಂದ್ರಾ ಪಿಕಪ್ ವಾಹನವು ಸಲೀಂ ಅವರು ಚಲಾಯಿಸುತ್ತಿದ್ದ ಆಕ್ಟಿವಾ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಸಲೀಂ ಅವರು ರಸ್ತೆಗೆ ಬಿದ್ದಿದ್ದು, ಹೆಲ್ಮೆಟ್ ಧರಿಸಿದ್ದರೂ ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪುತ್ತೂರು ಕಡೆಯಿಂದ ಸಾಗುತ್ತಿದ್ದ ಪಿಕಪ್ ಎದುರಿನಿಂದ ಬರುತ್ತಿದ್ದ ಆ್ಯಕ್ಟೀವಾಕ್ಕೆ ಡಿಕ್ಕಿ ಹೊಡೆದಿದೆ. ಪಿಕಪ್ ರಸ್ತೆಯಿಂದ ಎಸೆಯಲ್ಪಟ್ಟು, ಪಕ್ಕದ ಮೋರಿಯಿಂದಾಚೆ ಬಿದ್ದಿದೆ. ಆ್ಯಕ್ಟೀವಾಕ್ಕೆ ತೀವ್ರ ಹಾನಿಯಾಗಿದೆ.

ಅಪಘಾತದ ಬಳಿಕ ಪಿಕಪ್ ವಾಹನದ ನಂಬರ್ ಪ್ಲೇಟ್‌ಗೆ ಕಪ್ಪು ಬಣ್ಣ ಬಳಿದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರಿನಲ್ಲಿ ಸ್ಕೂಟರ್ ಢಿಕ್ಕಿ: ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊಯಿಲ ಸೀತಾರಾಮ ಗೌಡ ಮೃತ್ಯು!!

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವರು ಬುಧವಾರ ಮಂಗಳೂರಿನ ಕೆಪಿಟಿ ಬಳಿ ಸಂಭವಿಸಿದ…