tamanvi
ಪ್ರಚಲಿತ

ಮಾ. 29: ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಬಂಪರ್ ಡ್ರಾ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಯೋಜನೆಯಾಗಿ ಪ್ರಥಮ ಬಾರಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ನಡೆಸಲಾಗಿದ್ದ `ಪುತ್ತೂರು ಶಾಪಿಂಗ್ ಹಬ್ಬ’ದ ಮೆಗಾ ಡ್ರಾ ಮಾ. 29ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ ಗಂಟೆ 5.30ಕ್ಕೆ ನಡೆಯಲಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ತಿಳಿಸಿದ್ದಾರೆ.

ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದಧಿಗೋಷ್ಠಿಯಲ್ಲಿ ಮಾತನಾಡಿ, ಆನ್‌ಲೈನ್ ಮತ್ತು ದೊಡ್ಡ ಮಾರ್ಟ್ಗಳ ನಡುವಿನ ಸ್ಪರ್ಧೆಗಳ ನಡುವೆ ನಮ್ಮ ಗ್ರಾಹಕರನ್ನು ನಮ್ಮೊಂದಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪುತ್ತೂರಿನ ವರ್ತಕರ ಸಂಘದ ವತಿಯಿಂದ ಕಳೆದ ಎರಡು ತಿಂಗಳಿನಿಂದ ಪುತ್ತೂರು ಶಾಪಿಂಗ್ ಹಬ್ಬದ ಆಚರಣೆ ನಡೆಸಲಾಗಿತ್ತು. ಪುತ್ತೂರಿನ ಹೆಚ್ಚಿನ ಸಂಘದ ಸದಸ್ಯತನ ಹೊಂದಿದ್ದ ವಾಣಿಜ್ಯ ಮಳಿಗೆಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ಕೂಪನ್ ಕೊಡಲಾಗುತ್ತಿತ್ತು. ವ್ಯಾಪಾರ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಕಳೆದ 8 ವಾರಗಳ ಕಾಲ ಪ್ರತಿ ವಾರ ಸಂಘದ ಕಚೇರಿಯಲ್ಲಿ ಕೂಪನ್ ಡ್ರಾ ಮಾಡಿ ಅದರಲ್ಲಿ ಬಹುಮಾನವಾಗಿ 5ಜಿ ಮೊಬೈಲ್ ಫೋನ್ ಹಾಗೂ ೮೦ ಸಮಾಧಾನಕರ ಬಹುಮಾನಗಳನ್ನು ಗ್ರಾಹಕರಿಗೆ ವಿತರಿಸಲಾಗಿತ್ತು. ಇದೀಗ ಮೆಗಾ ಡ್ರಾವನ್ನು ವರ್ತಕ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಜೊತೆಗೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾ. 29ರಂದು ನಡೆಯಲಿರುವ ಮೆಗಾ ಬಂಪರ್ ಬಹುಮಾನವಾಗಿ ಮಾರುತಿ ಆಲ್ಟೋ ಕಾರು, ಜೊತೆಗೆ ಬೈಕ್, ಪ್ರಿಡ್ಜ್, ಆನ್‌ಡ್ರಾಯ್ಡ್ ಮೊಬೈಲ್ ಟಿವಿಯನ್ನು ಅದೃಷ್ಟವಂತ ಗ್ರಾಹಕರು ಪಡೆಯಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ.ಅಹಮ್ಮದ್ ಮುದಸ್ಸರ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯ, ಸೋಜಾ ಅಲ್ಯೂಮಿನಿಯಂ ಮಾಲಕ ಗಿಲ್ಬರ್ಟ್ ಡಿಸೋಜ ಆಗಮಿಸಲಿದ್ದಾರೆ ಎಂದು ರವಿಕೃಷ್ಣ ಕಲ್ಲಾಜೆ ಹೇಳಿದರು.

ಪುತ್ತೂರಿನ ಸುತ್ತಮುತ್ತ ವ್ಯಾಪಾರ ವ್ಯವಹಾರದ ಅನುಗುಣವಾಗಿ ಸುಮಾರು 120 ಮಳಿಗೆಗಳಲ್ಲಿ ಕೂಪನ್ ಅನ್ನು ವರ್ತಕರು ತಮ್ಮ ಲಾಭದ ಒಂದಾAಶದಲ್ಲಿ ಗ್ರಾಹಕರಿಗೆ ಉಚಿತವಾಗಿ ಕೂಪನ್ ವಿತರಿಸಿದ್ದಾರೆ. ಸುಮಾರು 70 ಸಾವಿರ ಮಂದಿ ಗ್ರಾಹಕರಿಗೆ ಕೂಪನ್ ತಲುಪಿದೆ. ಸ್ಪಂಧಿಸಿದ ವರ್ತಕರಿಗೆ ಮತ್ತು ಗ್ರಾಹಕರಿಗೆ ಕೃತಜ್ಞತೆಗಳೊಂದಿಗೆ ಮುಂದೆಯೂ ಗ್ರಾಹಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ಧಿಗೋಷ್ಟಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಉಪಾಧ್ಯಕ್ಷರಾದ ಮನೋಜ್ ಟಿ.ವಿ ಮತ್ತು ಎಂ.ಜಿ ಅಬ್ದುಲ್ ರಫೀಕ್, ಕೋಶಾಧಿಕಾರಿ ಜಾನ್ ಕುಟೀನಾ, ಪುತ್ತೂರು ಹಬ್ಬದ ಸಂಚಾಲಕ ಶಶಿರಾಜ್ ರೈ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…