ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ `ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ಕಬಕದಲ್ಲಿ ನಡೆಯಿತು.
ಪ್ರತಿಭಟನೆಯ ಪ್ರಾರಂಭದಲ್ಲಿ ಕಬಕ ಜಂಕ್ಷನ್ನಿAದ ಗ್ರಾಮ ಪಂಚಾಯತ್ ಕಚೇರಿ ತನಕ ಪಾದಯಾತ್ರೆ ನಡೆಯಿತು. ನಂತರ ನಡೆದ ಸಭೆಯಲ್ಲಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಬಕ ಗ್ರಾಮಕ್ಕೆ ಸುಮಾರು 6.27ಕೋಟಿ ಅನುದಾನ ಬಂದಿದ್ದು ಗ್ರಾಮದಲ್ಲಿ ಎಲ್ಲಾ ರಸ್ತೆಗಳು, ಶಾಲಾ, ಕಾಲೇಜು, ಸ್ವಚ್ಛತ ಯಾರ್ಡ್, ರುದ್ರಭೂಮಿ ,ಪಾರ್ಕ್, ಪಂಚಾಯತ್ ಕಟ್ಟಡ, ಪೋಳ್ಯ, ಕೆದುವಡ್ಕ, ಮುಂಗ್ಲಿಮನೆ, ನೆಕ್ಕರೆ, ದೇವಸ್ಯ, ಕಾಜುಬಳ್ಳಿ, ಕಬಕ ವರ್ತುಲರಸ್ತೆ ಅಭಿರುದ್ದಿ, ಕಾಜುಬಳ್ಳಿ ಸೇತುವೆ ನಿರ್ಮಾಣ, ಜೆಜೆಎಂ, ಮನೆ ಮನೆ ನೀರಿನ ವ್ಯವಸ್ಥೆ ಇನ್ನಿತರ ಅಭಿವೃದ್ದಿ ಆಗಿದೆ. ಈಗಿನ ಸರಕಾರ ಮತ್ತು ಪುತ್ತೂರಿನ ಶಾಸಕರು ಮೂರು ವರ್ಷದಲ್ಲಿ ಕೇವಲ ರೂ.25 ಲಕ್ಷ ಅನುದಾನ ನೀಡಿದ್ದಾರೆ. ಕಬಕ ಗ್ರಾಮಕ್ಕೆ ನೀಡಿರುವ ಅನುದಾನಗಳ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ರ್ವಾರ ಮಾತನಾಡಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯೆ ದಿವ್ಯ ಪುರುಷೋತ್ತಮ, ನಗರ ಮಂಡಲದ ಉದ್ಯಮಿ ಪ್ರಕೋಷ್ಟದ ಸಂಚಾಲಕ ಉಜ್ವಲ್ ಪ್ರಭು, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ವಿದ್ಯಾಧರ ಜೈನ್, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ನಿಕಟಪೂರ್ವ ಕಾರ್ಯದರ್ಶಿ ನಿತೀಶ್ ಶಾಂತಿವನ, ಆರ್ಯಾಪು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅಭಿಜಿತ್ ಕೊಡಿಪ್ಪಾಡಿ, ನಗರ ಮಂಡಲದ ಮಹಿಳಾ ಮೋರ್ಚಾದ ಕಾರ್ಯದರ್ಶಿ ರಮಣಿ ಡಿ ಗಾಣಿಗ, ಆಶಾ ಭಗವಾನ್, ಗೌರಿ ಬನ್ನೂರು, ಕಬಕ ಗ್ರಾ.ಪಂ ಮಾಜಿ ಅಧ್ಯಕ್ಷೆ ಸುಶೀಲ, ಮಾಜಿ ಸದಸ್ಯ ರಾಜೇಶ್ ಪೋಳ್ಯ, ಹಿರಿಯ ಕಾರ್ಯಕರ್ತ ಸುರೇಶ್ ಆಳ್ವ, ಆನಂದ ನೆಕ್ಕರೆ, ವಿಶ್ವನಾಥ ಕುಲಾಲ್, ಬಾಲಕೃಷ್ಣ ಪೋಳ್ಯ, ವಸಂತ ನೆಕ್ರಾಜೆ, ಲೋಕೇಶ್ ಬಾಕಿಮಾರು, ಚಂದ್ರಶೇಖರ ಕೊಡಿಪ್ಪಾಡಿ, ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಗಾಣಿಗ ಸಹಿತ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ವಿನಯ ಕುಮಾರ್ ಕಲ್ಲೇಗ ಸ್ವಾಗತಿಸಿದರು. ರುಕ್ಮಯ್ಯ ಗೌಡ ಪೋಳ್ಯ ವಂದಿಸಿದರು. ಜಯರಾಮ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.




















