tamanvi
ಪ್ರಚಲಿತ

ನೆಹರೂ ನಗರ ಪಟ್ಲ ಪ್ಲಾನೆಟ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರೂ ನಗರದ ಪಟ್ಲ ಪ್ಲಾನೆಟ್ ಕಟ್ಟಡದಲ್ಲಿ ಕಟ್ಟಡ ಆರಂಭಗೊಂಡು 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸುಮಾರು 15 ಅಂಗಡಿ ಮಾಲೀಕರನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಅನ್ನು ಎಂ.ವಿ. ಸಂಸ್ಥೆಯ ಸಂಸ್ಥಾಪಕ ಸುಬ್ರಮಣಿ ಪಿ.ವಿ. ಅವರು 2025ರ ಆಗಸ್ಟ್ 15ರಂದು ಆರಂಭಿಸಿದ್ದರು. ಎಲ್ಲರ ಸಹಮತದೊಂದಿಗೆ 2026ರಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮೂಹಿಕವಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಅದರಂತೆ ಕಟ್ಟಡದ ಮಾಲೀಕ ಮಾಧವ ಕೆ. ಪೂಜಾರಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮಾಧವ ಕೆ. ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮದಗಶ್ರೀ ಪ್ರಿಂಟರ್ಸ್‌ನ ವಿಜಯ, ಜೀವನ್ ಜ್ಯೋತಿ ಎಲೆಕ್ಟ್ರಿಕಲ್ಸ್‌ನ ತಿಮ್ಮಪ್ಪ ಗೌಡ, ಸಾಯಿ ಪ್ರಿಂಟಿಂಗ್ ಹಬ್‌ನ ಧನುಷ್, ಮಹಾಲಿಂಗೇಶ್ವರ ಬ್ಯಾಟರಿಯ ವಿಷ್ಣು ಭಟ್, ಲಕ್ಷ್ಮೀ ಪ್ರಿಯ ಸ್ಟೋರ್ಸ್‌ನ ಶಿವಕುಮಾರ್, ಸೃಷ್ಟಿ ಕನ್‌ಸ್ಟ್ರಕ್ಷನ್‌ನ ಶಿವಪ್ರಸಾದ್ ಭಟ್, ತುಳಸಿ ಟೈಲರ್ ಹಾಗೂ ಹರ್ಬಲ್ ಬ್ಯೂಟಿ ಪಾರ್ಲರ್‌ನ ಸತೀಶ್, ಕಿಡ್ಸ್ ಪ್ಲೇಯ ಜಯಲಕ್ಷ್ಮಿ, ಎಂ.ವಿ. ಸರ್ಜಿಕಲ್ಸ್ ಆ್ಯಂಡ್ ಡಿಜಿಟಲ್ ಸೇವಾ ಕೇಂದ್ರದ ಚಂದ್ರಲೇಖಾ, ಜೀವ ಮೆಡಿಕಲ್ಸ್‌ನ ಸಂಪತ್ ಕುಮಾರ್, ಲೈಫ್ ಕೇರ್ ಲ್ಯಾಬ್‌ನ ಪ್ರದೀಪ್, ನವೀನ್ ಸ್ಟುಡಿಯೋದ ವಿನಯ ರೈ, ಪ್ರಶ್ವಿತ್ ಜ್ಯುವೆಲ್ಲರ್ಸ್‌ನ ಪ್ರಕಾಶ್ ಆಚಾರ್ಯ, ಪತಂಜಲಿ ಸ್ಟೋರ್ಸ್‌ನ ಪಿ. ವಿಠಲ ಹಾಗೂ ಹೋಟೆಲ್ ಶಿವಸಾಗರ್‌ನ ಉಮೇಶ್ ಸೇರಿದಂತೆ ಕಟ್ಟಡದ ವಿವಿಧ ವ್ಯಾಪಾರಸ್ಥರು ಭಾಗವಹಿಸಿದ್ದರು.

ಶಿವಪ್ರಸಾದ್ ಭಟ್ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು. ಸುಬ್ರಮಣಿ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ಕಟ್ಟಡದ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…