ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರು ನಿವಾಸಿ ದಿ. ಬೆಳ್ತ ಅವರ ಪತ್ನಿ ಮುಳಿಯಾರು (80 ವ.) ಆ. 14ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಬೇಡು, ಬಾಬು, ಪುತ್ರಿಯರಾದ ಐತೆ, ಲಕ್ಷ್ಮೀ, ಸೊಸೆಯಂದಿರಾದ ಜಾನಕಿ, ಸುಮಿತ್ರಾ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆದಿದ್ದು, ಕಾಂಗ್ರೆಸ್ ವಲಯಾಧ್ಯಕ್ಷ ಗಿರೀಶ್ ರೈ ಕೈಕಾರ ಅವರು ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಿದರು. ಕೇಶವ ಸುವರ್ಣ ಆರ್ಯಾಪು, ಅಬ್ಬಾಸ್ ಸಹಕರಿಸಿದರು.


































