tamanvi
ನಿಧನ

ನಿಂತಿಕಲ್ಲು ಅಜಯ್ ಫೂಟ್ ವೇರ್ ಮಾಲಕ ಅಜಯ್ ವಿಧಿವಶ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪಂಜ: ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೆ.30ರಂದು ಪಂಜದಿಂದ ವರದಿಯಾಗಿದೆ.

ಮೃತರನ್ನು ಪಂಜದ ಕಂರ್ಬು ನಿವಾಸಿ ಸೀತಾರಾಮ ಗೌಡ ಹಾಗೂ ಉಮಾವತಿ ದಂಪತಿಯ ಪುತ್ರ ಅಜಯ್ (25) ಎಂದು ಗುರುತಿಸಲಾಗಿದೆ.

ಅಜಯ್ ಅವರು ಸೆ.29ರಂದು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.29ರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಅಜಯ್ ಅವರು ಕಳೆದ ಕೆಲವು ವರ್ಷಗಳಿಂದ ನಿಂತಿಕಲ್ಲಿನಲ್ಲಿ ‘ಅಜಯ್ ಫೂಟ್ ವೇರ್’ ಎಂಬ ಪಾದರಕ್ಷೆಗಳ ಅಂಗಡಿಯನ್ನು ನಡೆಸುತ್ತಿದ್ದರು.

ಮೃತರು ತಂದೆ, ತಾಯಿ, ಸಹೋದರಿ ಜಸ್ಮಿತಾ ದೇವಿಪ್ರಸಾದ್, ಸಹೋದರ ಅಕ್ಷಯ್ ಹಾಗೂ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts