ನಿಧನ

ವಿದ್ಯುತ್ ಆಘಾತಕ್ಕೆ ಮೆಸ್ಕಾಂ ಪವರ್‌ಮ್ಯಾನ್ ಮೃತ್ಯು; ಶಾಸಕ ಅಶೋಕ್ ರೈ ಭೇಟಿ, ಕುಟುಂಬಕ್ಕೆ ಸಾಂತ್ವನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ದಾರುಣ ಘಟನೆ ಅ.3ರಂದು ಕೆದಿಲ ಶಾಲಾ ಬಳಿ ನಡೆದಿದೆ.

gl

ಕೆಮ್ಮಾಯಿ ನಿವಾಸಿ, ಮೆಸ್ಕಾಂ ವಿಟ್ಲ ಉಪಕೇಂದ್ರದ ಪವರ್‌ಮ್ಯಾನ್ ರವಿಚಂದ್ರ ಯಾನೆ ರವಿ (52) ಮೃತಪಟ್ಟವರು.

ವಿಟ್ಲ ಉಪಕೇಂದ್ರದ ಮಾಣಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಚಂದ್ರ ಅವರು ಕೆದಿಲ, ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ವಿದ್ಯುತ್ ಸಂಬಂಧಿತ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅ.3ರಂದು ಕೆದಿಲ ಭಾಗದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಅವರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾದರು. ಅಸ್ವಸ್ಥಗೊಂಡ ಅವರನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಮೃತರು ಪತ್ನಿ ಚಂದ್ರಕಲಾ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಶಾಸಕ ಅಶೋಕ್ ರೈ ಭೇಟಿ

ವಿದ್ಯುತ್ ಆಘಾತದಿಂದ ಮೃತಪಟ್ಟ ರವಿಚಂದ್ರ ಅವರ ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ, ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು. ದುಃಖದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿ, ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts