tamanvi
ಶಿಕ್ಷಣ

ಯುದ್ಧ ವಿಮಾನ ಹಾರಿ ಬಿಟ್ಟ ವಿದ್ಯಾರ್ಥಿಗಳು!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‌ ಕಾಲೇಜಿನಲ್ಲಿ ಸಿನೆರ್ಜಿಯಾ-2025ರ ಅಂಗವಾಗಿ ನಡೆದ ರೋಮಾಂಚಕಾರಿ ಏರೋಫಿಲಿಯಾ ಏರ್ ಶೋ  ನಡೆದಿದೆ.

ಈ ಏರ್‌ಶೋನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊರಗಿನವರಿಂದ ತಯಾರಿಸಲ್ಪಟ್ಟ ಸುಮಾರು 10 ವಿಮಾನಗಳು ಹಾರಾಟ ನಡೆಸಿತ್ತು. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿರುವ 7 ವಿಮಾನಗಳನ್ನು ಇಲ್ಲಿ ಹಾರಿಸಲಾಗಿದೆ. ಫ್ಲೈಟ್ ತಯಾರಿ, ಪೈಲಟ್ ತಯಾರಿ ಸೇರಿದಂತೆ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಈ ಏರ್‌ಶೋಗೆ ತಯಾರಿ ನಡೆಸಿದ್ದಾರೆ.

ಈ ಏರ್‌ಶೋನಲ್ಲಿ ನಾಲ್ಕು ಪೈಲಟ್ ಜೆಟ್ಸ್ ಅಂದರೆ ಎಫ್-22 ರ‌್ಯಾಪಿಡ್ ಅಮೇರಿಕಾ ರೆಪ್ಲಿಕಾ ಮಾದರಿಯ ವಿಮಾನಗಳು, ಮೂರು ಜೂನಿಯರ್ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ವಿಮಾನಗಳು. ಇನ್ನೊಂದು ಡ್ರೋನ್ ಅನ್ನು ಹಾರಿಸಲಾಗಿದೆ. ಜೊತೆಗೆ ಎಫ್‌ಟಿವಿ ರೇಸಿಂಗ್ ಹಾಗೂ ಯುದ್ಧ ವಿಮಾನವನ್ನು ಹಾರಿಸಲಾಗಿದೆ. ಉಳಿದಂತೆ ಹಾರಾಟ ನಡೆಸಿದ ಮೂರು ವಿಮಾನಗಳು ಹೊರಗಿನಿಂದ ಬಂದವು.

ವಿದ್ಯಾರ್ಥಿಗಳೇ ಪೈಲಟ್’ಗಳಾದ್ರು:

ರಂಜಿತ್, ಸಮೃದ್ಧ್ ಸಾಲಿಮ್, ಪ್ರಥಮ್, ಸನತ್, ಯಶಸ್ ಸೇರಿದಂತೆ ಸಹ್ಯಾದ್ರಿ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳೇ ಪೈಲಟ್‌ಗಳಾಗಿ ವಿಮಾನ ಹಾರಿಸಿದ್ದಾರೆ. ಸಿನೆರ್ಜಿಯಾ-2025ರ ಅಂಗವಾಗಿ ವಿವಿಧ ಶಾಲೆಗಳ ಹೈಸ್ಕೂಲ್ ಮಕ್ಕಳಿಂದ ಪ್ರಾಜೆಕ್ಟ್‌ಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಮಕ್ಕಳಲ್ಲೂ ವಿಜ್ಞಾನ- ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹ್ಯಾದ್ರಿ ಕಾಲೇಜು ಏರ್‌ಶೋವನ್ನು ಆಯೋಜಿಸಲಾಗಿದೆ. ಒಟ್ಟಿನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಈ ಏರ್‌ಶೋ ಸಾಹಸವನ್ನು ನೆರೆದಿದ್ದವರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…