ಪುತ್ತೂರು: ಸಂಪ್ಯ ಕಾವೇರಿ ಕಾಂಪ್ಲೆಕ್ಸ್ ನಲ್ಲಿ ಮಯೂರಿ ಆಯುರ್ವೇದಿಕ್ ಕ್ಲಿನಿಕ್ ಗುರುವಾರ ಶುಭಾರಂಭಗೊಂಡಿತು.
ಮುಖ್ಯ ಅತಿಥಿಯಾಗಿದ್ದ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ವೈದ್ಯರು ಹಾಗೂ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ವೈದ್ಯರಲ್ಲಿ ಬದ್ಧತೆ, ಸಮಯಪಾಲನೆ, ಚಿಕಿತ್ಸೆಗಳ ಮಾಹಿತಿ ಅತ್ಯಂತ ಮುಖ್ಯವಾಗಿರುತ್ತದೆ. ರೋಗಿಗಳು ವೈದ್ಯನಲ್ಲಿ ಬರುವುದು ರೋಗದಿಂದ ಮುಕ್ತವಾಗಲು. ಡಾ.ಭವ್ಯರವರು ವೈದ್ಯಕೀಯ ಲೋಕದಲ್ಲಿ ತಾಂತ್ರಿಕವಾಗಿ ಶಿಕ್ಷಣ ಪಡೆದು ಅನುಭವ ಪಡೆದಿದ್ದು, ಕಾಯಿಲೆ ಹೇಗಿರುತ್ತದೆ? ಅದರ ಲಕ್ಷಣಗಳೇನು? ಎನ್ನುವುದನ್ನು ಅವರು ಸಾಕ್ಷೀಕರಿಸಿದ್ದಾರೆ. ರೋಗಿಯ ರೋಗವನ್ನು ಗುಣಪಡಿಸುವಲ್ಲಿ ವೈದ್ಯನಲ್ಲಿ ಮನುಷತ್ಯದ ಜೊತೆಗೆ ರೋಗಿಯಲ್ಲಿ ಮಾನಸಿಕ ಸ್ಥೈರ್ಯವನ್ನು ಮೂಡಿಸ ಬೇಕಾಗುತ್ತದೆ ಎಂದರು.

ಜಾಲ್ಸೂರ್ ಅನಿಶ ಕ್ಲಿನಿಕ್ ನ ಆಯುರ್ವೇದ ತಜ್ಞ ಡಾ.ಹರಿಪ್ರಸಾದ್ ಕೆ.ಎಸ್ ಅವರು ದೀಪ ಪ್ರಜ್ವಲನೆಗೈಯ್ದು ಮಾತನಾಡಿ, ಜನರ ಸೇವೆ ಮಾಡಲು ಡಾ.ಭವ್ಯ ಅವರು ಈ ಭಾಗದಲ್ಲಿ ಕ್ಲಿನಿಕ್ ಆರಂಭಿಸಿರುವುದು ಶ್ಲಾಘನೀಯ. ಡಾ.ಭವ್ಯರಿಂದ ಫಲಾನುಭವಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತಾಗಲಿ ಆ ಮೂಲಕ ಊರಿಗೆ ಪ್ರಯೋಜನವಾಗಲಿ ಎಂದರು.

ಗೌರವ ಉಪಸ್ಥಿತಿಗಳಾಗಿ ಮಹಾವೀರ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಬೆಳೆಯುತ್ತಿರುವ ಸಂಪ್ಯದಲ್ಲಿ ಆಯುರ್ವೇದ ಚಿಕಿತ್ಸೆ ಆರಂಭಗೊಂಡಿರುವುದು ಒಳ್ಳೆಯ ಬೆಳವಣಿಗೆ ಜೊತೆಗೆ ಈ ಭಾಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಇದು ಫಲದಾಯಕವೆನಿಸಲಿದೆ. ಆರೋಗ್ಯ ಪರೀಕ್ಷಿಸಲು ಕಾಯಿಲೆ ಇರಬೇಕೇಂದಿಲ್ಲ, ವರ್ಷಕ್ಕೆ ಒಮ್ಮೆಯಾದರೂ ಪರೀಕ್ಷೆ ಮಾಡಿ ರೋಗವನ್ನು ಮೊದಲೇ ಪತ್ತೆ ಹಚ್ಚಬಹುದಾಗಿದೆ. ಮನುಷ್ಯನಿಗೆ ಮಧುಮೇಹ ಮತ್ತು ರಕ್ತದೊತ್ತಡ ಇವು ಸ್ಲೋ ಪಾಯ್ಸಿನ್ ಆಗಿದ್ದು ವ್ಯಕ್ತಿಯ ನಿರ್ದಿಷ್ಟ ಪ್ರಾಯದ ಬಳಿಕ ಇದನ್ನು ನಿರಂತರ ಪರೀಕ್ಷೆ ಮಾಡಬೇಕಾಗಿದೆ. ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ಬಾರಿ 50ನೇ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು ಡಾ.ಭವ್ಯರವರು ಈ ಶಿಬಿರದಲ್ಲಿ ಪಾಲ್ಗೊಂಡು ಜನರ ಉತ್ತಮ ಆರೋಗ್ಯದತ್ತ ಹೆಜ್ಜೆ ಇಡಬೇಕಾಗಿದೆ ಎಂದರು.
ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಸಂಪ್ಯ ಪ್ರದೇಶವು ಬೆಳೆಯುತ್ತಿರುವ ಪಟ್ಟಣವಾಗಿದ್ದು ಇಲ್ಲಿ ಆಲೋಪತಿ ಆಸ್ಪತ್ರೆ, ವಿದ್ಯಾಸಂಸ್ಥೆ ಇದೀಗ ಆಯುರ್ವೇದಿಕ್ ಕ್ಲಿನಿಕ್ ಒಳಗೊಂಡಿರುವುದು ಶ್ಲಾಘನೀಯ. ಇಲ್ಲಿನ ವಿದ್ಯಾಸಂಸ್ಥೆ ಆಗಲಿ ಅಥವಾ ಇಲ್ಲಿನ ನಾಗರಿಕರಿಗೆ ಆಗಲಿ, ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಬಂದರೆ ಅದಕ್ಕೆ ಉತ್ತಮ ಚಿಕಿತ್ಸೆ ನೀಡಲು ಬಹಳ ಸಹಕಾರಿಯಾಗಿದೆ. ಡಾ.ಭವ್ಯರವರ ಪತಿ ಮೊಟ್ಟೆತ್ತಡ್ಕ ಮಿಶನ್ ಮೂಲೆಯ ಶ್ರೀ ರಕ್ತಚಾಮುಂಡೇಶ್ವರಿ ಗುಡಿಯ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ, ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ, ಅಲೋಪತಿ, ಆಯುರ್ವೇದಿಕ್ ಸಂಸ್ಥೆ ಒಳಗೊಂಡಿರುವುದು ಪ್ರದೇಶ ಬೆಳೆಯಲು ಸಹಕಾರಿಯಾಗಿದೆ. ಈ ಸಂಸ್ಥೆ ಬೆಳೆಯಲು ಕುಲದೇವತೆಗಳಾದ ಶ್ರೀ ಭಗವತಿ, ಶ್ರೀ ಮಹಾವಿಷ್ಣು, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಪ್ರಾಪ್ತಿಯಾಗಿ ಸಂಸ್ಥೆ ಉತ್ತರೋತ್ತರ ಬೆಳೆಯಲಿ ಎಂದರು.
ಪುತ್ತೂರು ವಾಣಿಯನ್ ಗಾಣಿಗ ಸಮುದಾಯ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ, ಸಂಪ್ಯ ಕಾವೇರಿ ಕಾಂಪ್ಲೆಕ್ಸ್ ಮಾಲಕ ಭೀಮಯ್ಯ ಭಟ್, ಮಂಗಳೂರು ಎನ್.ಎಂ.ಪಿ.ಯ ಅಸಿಸ್ಟೆಂಟ್ ಇಂಜಿನಿಯರ್ ಪ್ರಶಾಂತ್ ಕುಮಾರ್, ಪುತ್ತೂರು ಎಚ್. ಇ.ಎಫ್ ಅಧ್ಯಕ್ಷ ಮೋಹನ ಕೆ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಗೌರವಾಧ್ಯಕ್ಷ ಸತೀಶ್ ರೈ ಮಿಶನ್ ಮೂಲೆ, ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ ಸಹಿತ ಡಾ.ಭವ್ಯ ಮನೋಹರ್ ಹಾಗೂ ಮನೋಹರ್ ಮತ್ತು ಮುಕ್ತಲತಾ ಮಹಾಬಲಡ್ಕ, ತಿಮ್ಮಪ್ಪ ಪಾಟಾಳಿ, ಸುಮತಿ ತಿಮ್ಮಪ್ಪ ಪಾಟಾಳಿ, ಕುಟುಂಬಸ್ಥರು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನಸು ಈಡೇರಿತು..ಪ್ರೋತ್ಸಾಹವಿರಲಿ..
ಮಯೂರಿ ಆಯುರ್ವೇದಿಕೆ ಕ್ಲಿನಿಕಿನ ವೈದ್ಯೆ ಡಾ .ಭವ್ಯ ಮನೋಹರ್ ಮಾತನಾಡಿ, ನನಗೆ ವಿದ್ಯಾರ್ಥಿ ಜೀವನದಿಂದಲೂ ಆಯುರ್ವೇದಿಕ್ ವೈದ್ಯೆಯಾಗಿ ಜನರ ಸೇವೆ ಮಾಡಬೇಕೆನ್ನುವ ಕನಸು ಇತ್ತು. ಆಯುರ್ವೇದಿಕ್ ಪದವಿ ಪಡೆದು ಬಳಿಕ, ಕಳೆದ 9 ವರ್ಷಗಳಿಂದ ಸುಳ್ಯ ತಾಲೂಕು ಆರ್.ಬಿ.ಎಸ್.ಕೆ. (ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ) ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಈ ಭಾಗದಲ್ಲಿ ಎಲ್ಲರ ಒ್ರೋತ್ಸಾಹದೊಂದಿಗೆ ಜನರ ಸೇವೆಗಾಗಿ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತಿದ್ದೇನೆ. ನನ್ನ ಈ ವೈದ್ಯಕೀಯ ಜೀವನದಲ್ಲಿ ನನ್ನ ಹಾಗೂ ನನ್ನ ಪತಿಯ ಹೆತ್ತವರು, ಗುರುಗಳು, ಕುಟುಂಬಿಕರು, ಹಿತೈಷಿಗಳ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾಗದು. ಜನರ ಸೇವೆಗೆ ನಮ್ಮ ಕ್ಲಿನಿಕ್ ಎಂದಿಗೂ ಲಭ್ಯವಿದ್ದು ಜನರ ಪ್ರೋತ್ಸಾಹ ಅತೀ ಅಗತ್ಯವಾಗಿ ಬೇಕಾಗಿದೆ ಎಂದರು.
ಚಿಕಿತ್ಸಾ ಸಮಯ..
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00
ಅಪರಾಹ್ನ 2.00 ರಿಂದ 4.00
ಶನಿವಾರ ಹಾಗೂ ಆದಿತ್ಯವಾರ ವಾರದ ರಜೆ
ಸಂಪರ್ಕಕ್ಕೆ:94811 44760, 79756 33312























