tamanvi
ಉದ್ಯೋಗ

ಪೊಲೀಸ್ ನೇಮಕಾತಿ ಪರೀಕ್ಷೆ: ದ್ವಿತೀಯ ಅವಧಿಯ ಸಮಯ ಬದಲಿಸಿದ ಕೆಇಎ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ನೇಮಕಾತಿಗೆ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ದ್ವಿತೀಯ ಅವಧಿಯ ವೇಳಾಪಟ್ಟಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಬದಲಾವಣೆ ಮಾಡಿದೆ.

maithri

ಈ ಮೊದಲು ಮಧ್ಯಾಹ್ನ 2.30 ಗಂಟೆಗೆ ಆರಂಭವಾಗಬೇಕಿದ್ದ ದ್ವಿತೀಯ ಅವಧಿಯ ಪರೀಕ್ಷೆ ಇದೀಗ ಸಂಜೆ 4.00 ಗಂಟೆಯಿಂದ 5.30 ಗಂಟೆಯವರೆಗೆ ನಡೆಯಲಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಹಲವು ಅಭ್ಯರ್ಥಿಗಳಿಗೆ ಬೆಳಗಿನ ಹಾಗೂ ಮಧ್ಯಾಹ್ನದ ಪರೀಕ್ಷೆಗಳಿಗಾಗಿ ವಿಭಿನ್ನ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡು ಕೇಂದ್ರಗಳ ನಡುವಿನ ಅಂತರ, ಸಂಚಾರ ದಟ್ಟಣೆ ಹಾಗೂ ಸಾರಿಗೆ ಸಮಸ್ಯೆಯಿಂದ ನಿಗದಿತ ಸಮಯಕ್ಕೆ ಎರಡನೇ ಕೇಂದ್ರ ತಲುಪುವುದು ಕಷ್ಟವಾಗುತ್ತಿದೆ ಎಂದು ಅಭ್ಯರ್ಥಿಗಳು ಹಾಗೂ ಪೋಷಕರು ಕೆಇಎಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ಪರಿಗಣಿಸಿದ ಕೆಇಎ, ಅಭ್ಯರ್ಥಿಗಳಿಗೆ ಪ್ರಯಾಣಿಸಲು ಹೆಚ್ಚಿನ ಸಮಯಾವಕಾಶ ಕಲ್ಪಿಸುವ ಉದ್ದೇಶದಿಂದ ದ್ವಿತೀಯ ಅವಧಿಯ ಪರೀಕ್ಷೆಯನ್ನು ಒಂದೂವರೆ ಗಂಟೆ ಮುಂದೂಡಿದೆ.

ಆದರೆ ಬೆಳಗಿನ ಅವಧಿಯ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ. ಬೆಳಗಿನ ಪರೀಕ್ಷೆ ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆಯೇ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಿಂದ ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ದ್ವಿತೀಯ ಪರೀಕ್ಷಾ ಕೇಂದ್ರವನ್ನು ತಲುಪಿ ಪ್ರಶಾಂತ ಮನಸ್ಸಿನಿಂದ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ ಎಂದು ಕೆಇಎ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಹಿಳಾ ಪತ್ರಕರ್ತೆಯರಿಗಾಗಿ ಇನ್ಫೋಸಿಸ್ ‘ಸ್ಪ್ರಿಂಗ್ ಬೋರ್ಡ್’ ತರಬೇತಿ: ಮಾರ್ಚ್ 10ರವರೆಗೆ ಅರ್ಜಿ ಆಹ್ವಾನ

ಬೆಂಗಳೂರು: ಮಹಿಳಾ ಪತ್ರಕರ್ತೆಯರ ವೃತ್ತಿಪರ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ…