tamanvi
ಉದ್ಯೋಗ

ದಿ ಪುತ್ತೂರು ಕ್ಲಬ್: ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013ರ ಜಾಗೃತಿ ಕಾರ್ಯಕ್ರಮ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದ ಪುತ್ತೂರು ಕ್ಲಬ್‌ನಲ್ಲಿ “ಕಾರ್ಯಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡೆ (POSH) ಕಾಯ್ದೆ” ಕುರಿತು ತರಗತಿ ಮಾದರಿಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

maithri

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಕೀಲರ ಸಂಘದ ನ್ಯಾಯವಾದಿ ಸೀಮಾ ನಾಗರಾಜ್ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಕಾಯ್ದೆಯಲ್ಲಿ ಅಳವಡಿಸಿರುವ ವಿವಿಧ ಅಂಶಗಳು, ಉದ್ಯೋಗಿಗಳ ಹಕ್ಕುಗಳು ಹಾಗೂ ಸಂಸ್ಥೆಗಳ ಜವಾಬ್ದಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇದೇ ವೇಳೆ ಕ್ಲಬ್‌ನ ಸಿಬ್ಬಂದಿ ಸದಸ್ಯರು ಕಾಯ್ದೆಗೆ ಸಂಬಂಧಿಸಿದ ತಮ್ಮ ಅನುಮಾನಗಳಿಗೆ ಉತ್ತರ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ, ಕಾರ್ಯದರ್ಶಿ ಕೆ. ವಿಶ್ವಾಸ್ ಶೆಣೈ, ಖಜಾಂಚಿ ಕೆ.ಪಿ. ದಿವಾಕರ್, ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ, ಶಾಂತಿ ಶೆಣೈ, ಸುಜಯಾ ದಿವಾಕರ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಸೀಮಾ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts