ಉದ್ಯೋಗ

ಕನ್ನಡ ಪ್ರಾಧ್ಯಾಪಕಿ ಡಾ. ಹರಿಣಾಕ್ಷಿ ಎಂ.ಡಿ. ಸೇವಾ ನಿವೃತಿ

Saraswathi

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕನ್ನಡ ಪ್ರಾಧ್ಯಾಪಕಿ ಡಾ. ಹರಿಣಾಕ್ಷಿ ಎಂ.ಡಿ. ಅವರು ಸುದೀರ್ಘ 36 ವರ್ಷಗಳ ಬೋಧನಾ ವೃತ್ತಿಯಿಂದ ಜೂನ್ 30ರಂದು ನಿವೃತ್ತಿ ಹೊಂದಿದರು.

maithri

ಪುತ್ತೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಗಿ ಸೇವೆ ಆರಂಭಿಸಿದ್ದ ಅವರು ಮುಂದೆ ಪುತ್ತೂರಿನ ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು, ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದರು. 1990ರಿಂದ 2026ರ ತನಕ ಬೋಧನಾ ವೃತ್ತಿ ನಿರ್ವಹಿಸಿದ್ದಾರೆ.

ಎಂ.ಫಿಲ್., ಪಿಎಚ್.ಡಿ. ಪದವೀಧರೆ

ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ಅವರು ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ‘ಡಾ. ನಾ ಮೊಗಸಾಲೆಯವರ ಉಲ್ಲಂಘನೆ ಕಾದಂಬರಿಯಲ್ಲಿ ಮಾತೃರೂಪಿ ಸಂಸ್ಕೃತಿಯಲ್ಲಿ ಸ್ತ್ರೀ ಕೇಂದ್ರಿತ ಸವಾಲುಗಳು’ ಎಂಬ ವಿಷಯದಲ್ಲಿ ಎಂ.ಫಿಲ್. ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ‘ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಕಥೆಗಳಲ್ಲಿ ಮಹಿಳೆ’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಗಳಿಸಿದ್ದಾರೆ. ಹತ್ತಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ.

ಪತಿ ಸೀತಾರಾಮ ಕೇವಳ ಮತ್ತು ಕುಟುಂಬದೊಂದಿಗೆ ಬನ್ನೂರಿನ ‘ಕೇವಳ’ದಲ್ಲಿ ವಾಸವಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts