tamanvi
ಕರಾವಳಿ

ಸಾಮರಸ್ಯ ಕಾಪಾಡಲು ಪುತ್ತೂರು ವರ್ತಕ ಸಂಘ ಮನವಿ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿಗೆ ಸಂಬಂಧಪಟ್ಟ ಘಟನೆ ಹಿನ್ನೆಲೆಯಲ್ಲಿ ರಾಗ ದ್ವೇಷವಿಲ್ಲದೇ ನ್ಯಾಯ ಒದಗಿಸಿಕೊಡಬೇಕು ಎಂದು ಡಿವೈಎಸ್ಪಿ ಅವರಿಗೆ ಪುತ್ತೂರು ವರ್ತಕ ಸಂಘ ಮನವಿ ನೀಡಿದೆ.

ಸೋಮವಾರ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ ವರ್ತಕ ಸಂಘದ ಪದಾಧಿಕಾರಿಗಳು, ಯಾವುದೇ ಗ್ರಾಹಕರಿಗೆ ವರ್ತಕರಿಂದ ಸಮಸ್ಯೆಗಳಾದರೆ ಗ್ರಾಹಕ ಸ್ನೇಹಿ ಕಾನೂನುಗಳ ಮೂಲಕ ಪರಿಹಾರ ಕಂಡುಕೊಳ್ಳುವ ಅವಕಾಶವಿದೆ. ಪರಸ್ಪರ ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸವನ್ನು ವರ್ತಕ ಸಂಘವು ಖಂಡಿಸುತ್ತಾ, ಸಂಬಂಧ ಪಟ್ಟ ಇಲಾಖೆಯವರು ಯಾವುದೇ ಪಕ್ಷಪಾತ, ರಾಗ ದ್ವೇಷ ವಿಲ್ಲದೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪುತ್ತೂರಿನ ಎಲ್ಲಾ ಜಾತಿ, ಧರ್ಮ, ಪಂಗಡಗಳನ್ನು ಒಳಗೊಂಡು ಪುತ್ತೂರಿನ ವರ್ತಕರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘವಾಗಿದ್ದು ಪುತ್ತೂರಿನ ಬಹುಪಾಲು ವರ್ತಕರು ಈ ಸಂಘದ ಸದಸ್ಯರಾಗಿರುತ್ತಾರೆ. ಅತ್ಯಂತ ಒಳ್ಳೆಯ ರೀತಿಯಲ್ಲಿ ಸಾಮರಸ್ಯದಿಂದ ವ್ಯವಹಾರ ನಡೆಸುತ್ತಿರುವ ನಮ್ಮೂರಿನ ವರ್ತಕರು ಎನೇ ಸಮಸ್ಯೆ ಬಂದಾಗಲೂ ಜತೆಯಾಗಿಯೇ ಎದುರಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…