ಅಪರಾಧ

ರಿಲಯನ್ಸ್ ಪವರ್ CFO ಬಂಧನ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬಯಿ: ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ (CFO) ಅಶೋಕ್‌ ಕುಮಾ‌ರ್ ಪಾಲ್ ಅವರನ್ನು ಬಂಧಿಸಿದೆ.

chennai-shopping
maithri

ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಒಳಗೊಂಡಿದೆ ಎಂದು ಹೇಳಲಾದ ಹಣಕಾಸಿನ ಅಕ್ರಮಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ ವಿಸ್ತರಿಸುತ್ತಿದ್ದಂತೆ ಈ ಮಹತ್ವದ ಬೆಳವಣಿಗೆ ನಡೆದಿದೆ.

ರಿಲಯನ್ಸ್ ಪವರ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿರುವ ಅಶೋಕ್‌ ಪಾಲ್ ಅವರ ಬಂಧನವು 68.2 ಕೋಟಿ ರೂಪಾಯಿ ಮೌಲ್ಯದ ಶಂಕಿತ ನಕಲಿ ಬ್ಯಾಂಕ್ ಗ್ಯಾರಂಟಿ ದಂಧೆಗೆ ಸಂಬಂಧಿಸಿದ್ದಾಗಿದೆ.

ಸಿಎ ಆಗಿರುವ ಪಾಲ್ ಅವರನ್ನು 2023 ಜನವರಿ 29 ರಂದು ಕಂಪನಿಯ CFO ಆಗಿ ನೇಮಿಸಲಾಗಿತ್ತು. ಅವರು 7 ವರ್ಷಗಳಿಗೂ ಹೆಚ್ಚು ಕಾಲ ರಿಲಯನ್ಸ್ ಪವರ್‌ನೊಂದಿಗೆ ಸಂಬಂಧ ಹೊಂದಿದ್ದಾರೆ.

ಈ ಕೇಸ್ 2024 ರಲ್ಲಿ ಆರ್ಥಿಕ ಅಪರಾಧಗಳ ವಿಭಾಗ (EOW) ಸಲ್ಲಿಸಿದ FIR ಆಧರಿಸಿದ್ದು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಕಂಪನಿಯಾದ ಭಾರತೀಯ ಸೌರಶಕ್ತಿ ನಿಗಮ (SECI)ಕ್ಕೆ ಸಲ್ಲಿಸಲಾದ ನಕಲಿ ಗ್ಯಾರಂಟಿಗೆ ಸಂಬಂಧಿಸಿ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 106