tamanvi
ಕರಾವಳಿ

ಕಲ್ಲುಗುಂಡಿಯ ಫಾತಿಮತ್ ನಿಶಾನ ಸಾವು ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಪುತ್ತೂರು ಕಾಂಗ್ರೆಸ್ ನಿಯೋಗ!

ಈ ಸುದ್ದಿಯನ್ನು ಶೇರ್ ಮಾಡಿ

ಕಲ್ಲುಗುಂಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಫಾತಿಮತ್ ನಿಶಾನ ಅವರ ತಾಯಿ ಮನೆಯಾದ ಕುಂಬ್ರದ ಸಾರೆಪುಣಿಗೆ ಪುತ್ತೂರು ಕಾಂಗ್ರೆಸ್ ಘಟಕದ ಪ್ರಮುಖರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಶಾಸಕ ಅಶೋಕ್ ಕುಮಾರ್ ರೈ ಅವರ ನಿರ್ದೇಶನದಂತೆ ಕಾಂಗ್ರೆಸ್ ಪ್ರಮುಖರ ವಿಶೇಷ ನಿಯೋಗ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬಿದರು.

ಕುಂಬ್ರ ಸಾರೆಪುಣಿ ನಿವಾಸಿಗಳಾದ ಹನೀಫ್ ಹಾಗೂ ಜುಬೈದಾ ದಂಪತಿಯ ಏಕೈಕ ಪುತ್ರಿ ಫಾತಿಮತ್ ನಿಶಾನ (22 ವ) ಅವರನ್ನು ಕಲ್ಲುಗುಂಡಿಯ ಅನ್ಸಾರ್ ಎಂಬವರಿಗೆ ನಾಲ್ಕು ವರ್ಷದ ಹಿಂದೆ ವಿವಾಹ ಮಾಡಿ ಕೊಟ್ಟಿದ್ದು, ಇತ್ತೀಚೆಗೆ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ನಿಶಾನ ಅವರಿಗೆ 2.5 ವರ್ಷದ ಮಗುವಿದ್ದು, ಪತಿ ಬೆಂಗಳೂರಿನಲ್ಲಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ನಿಶಾನ ಅವರ ಸಾವಿನಲ್ಲಿ ಅವರ ಅತ್ತೆ, ಮಾವ, ನಾದಿನಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಶಾಸಕರು ನಿಯೋಗವನ್ನು ಕಳುಹಿಸಿಕೊಟ್ಟಿದ್ದರು.

ನಿಯೋಗದಲ್ಲಿ ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಆಜಾದ್ ದರ್ಬೆ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಪ್ರಭ ಗೌಡ, ಮುಖಂಡರಾದ ಇಬ್ರಾಹಿಂ ಗೋಳಿಕಟ್ಟೆ, ಶರೀಫ್ ಬಲ್ನಾಡ್, ನೌಷಾದ ಬೊಳುವಾರ್, ಸಿನಾನ್ ದರ್ಬೆ, ಹಬೀಬ್ ಕಣ್ಣೂರು, ಬದ್ರುನ್ನೀಸಾ, ಪುರಂದರ ರೈ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…