tamanvi
ಕರಾವಳಿ

ಡಿ. 6 -7ರಂದು ಪುತ್ತೂರಿನಲ್ಲಿ ಗಾಂಧಾರಿ ವಿದ್ಯೆಯ ಪ್ರಯೋಗ! ವರ್ಣಕುಟೀರದ ವಿದ್ಯಾರ್ಥಿನಿ ಶಮಿಕರಿಂದ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆಯತ್ತ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗಾಂಧಾರಿ ವಿದ್ಯೆ ನಮ್ಮ ಸಂಸ್ಕೃತಿಯ ಪುರಾತನ ಕಲೆ. ಇದನ್ನು ಕರಗತ ಮಾಡಿಕೊಂಡಿರುವ ವಿದ್ಯಾರ್ಥಿನಿ ಶಮಿಕ ಅವರು ಡಿ. 6ರ ಮಧ್ಯಾಹ್ನದಿಂದ ಡಿ. 7ರ ಮಧ್ಯಾಹ್ನದವರೆಗೆ ಗಾಂಧಾರಿ ವಿದ್ಯೆಯ ಪ್ರಯೋಗದ ಮೂಲಕ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಕದ ತಟ್ಟಲಿದ್ದಾರೆ ಎಂದು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಣಕುಟೀರ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಗಾನ ಯಾನ, ಮಂತ್ರ ಯಾನ ಎಂಬ ಕಾರ್ಯಕ್ರಮ ಮಾಡಿದ್ದೇವೆ. ಇದೀಗ ಕಣ್ಣು ಮುಚ್ಚಿ 24 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಇಂದ್ರಪ್ರಸ್ತದ ವಿದ್ಯಾರ್ಥಿನಿ ಶಮಿಕ ಅವರು ಇದನ್ನು ನಡೆಸಿಕೊಡಲಿದ್ದು, ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ (ಯು.ಎಸ್.ಎ. ಕಂಪೆನಿ)ನ ಡಾ. ಮನೀಶ್ ವೈಶ್ನೋಯಿ ಅವರು ವಿಶೇಷ ಅತಿಥಿಯಾಗಿರುವರು ಎಂದರು.

ಡಿ.6ರ ಮಧ್ಯಾಹ್ನ ಗಂಟೆ 12ರಿಂದ ಮರು ದಿನ ಅಂದರೆ ಡಿ. 7ರ ಮಧ್ಯಾಹ್ನ 12 ಗಂಟೆಯ ತನಕ ನಿರಂತರ ಸ್ಯಾಂಡ್ ಆರ್ಟ್ ನಡೆಯಲಿದೆ. ಪ್ರತಿ 3 ಗಂಟೆಗೊಮ್ಮೆ ವಿಶ್ರಾಂತಿ. ಅವರ ಜೊತೆಗೆ ಸಂಸ್ಥೆಯ 12 ಮಂದಿ ಹಿನ್ನೆಲೆ ಸಂಗೀತ ಮತ್ತು ಹಾಡನ್ನು ಹಾಡಲಿದ್ದಾರೆ.ಪ್ರತಿಯೊಂದು ಹಾಡಿನ ಭಾವನೆಗೆ ತಕ್ಕಂತೆ ಶಮಿಕ ಅವರು ಸ್ಯಾಂಡ್ ಆರ್ಟ್ ಮಾಡಲಿದ್ದಾರೆ.

ಗಾಂಧಾರಿ ವಿದ್ಯೆ – 6th sense:

ಶಮಿಕ ಅವರ ತಂದೆ ಕೇಶವ ಮಾತನಾಡಿ, ಕಣ್ಣು ಮುಚ್ಚಿ ಬರೆದಿದ್ದನ್ನು ಓದುವ, ಕೊಠಡಿಯ ಆಚೆಯ ವಸ್ತುವನ್ನು ಗ್ರಹಿಸುವ ವಿದ್ಯೆಯೇ ಗಾಂಧಾರಿ ವಿದ್ಯೆ. ನಮ್ಮ 6th ಸೆನ್ಸ್ ಅನ್ನು ಚುರುಕುಗೊಳಿಸುವ ತಂತ್ರ ಇಲ್ಲಿದೆ. ಕಣ್ಣು ಮುಚ್ಚಿಕೊಂಡೇ ಪುಸ್ತಕ ಓದುತ್ತಾರೆ ಅಥವಾ ಸೈಕಲ್ ಚಲಾಯಿಸುತ್ತಾರೆ. ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ವಿದ್ಯೆಯನ್ನು ಶಮಿಕ ಪಡೆದಿದ್ದಾಳೆ. ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಶಮಿಕ ಅವರು ಮೂಡಿಗೆರೆಯ ಸತೀಶ್ ಪದ್ಮನಾಭ ಗುರೂಜಿ ಅವರಿಂದ ಗಾಂಧಾರಿ ವಿದ್ಯೆಯನ್ನು ಪಡೆದಿದ್ದಾಳೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಸದಸ್ಯ ಬಾಲಸುಬ್ರಹ್ಮಣ್ಯ ಶರ್ಮ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…