tamanvi
ಪ್ರಚಲಿತ

ಶಿಕ್ಷಕರ ದಿನಾಚರಣೆ: ಗಂಗಾಧರ ನಾಯ್ಕ್ ಕೂರೇಲು ಅವರಿಗೆ ಮರಾಟಿ ಯುವ ವೇದಿಕೆಯಿಂದ ಗೌರವಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮರಾಟಿ ಯುವ ವೇದಿಕೆ, ಕೊಂಬೆಟ್ಟು–ಪುತ್ತೂರು ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ಲಂಪಾಡಿಯ ಶಿಕ್ಷಕ ಗಂಗಾಧರ ನಾಯ್ಕ್ ಕೂರೇಲು ಅವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಿಗೆ ಶಾಲು ಹೊದಿಸಿ, ಫಲವಸ್ತು ಹಾಗೂ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮರಾಟಿ ಸಮಾಜ ಸೇವಾ ಸಂಘ (ರಿ.) ಕೊಂಬೆಟ್ಟು–ಪುತ್ತೂರು ಇದರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಎನ್.ಎಸ್., ಸದಸ್ಯ ಗಿರೀಶ್ ನಾಯ್ಕ್ ಸೊರಕೆ, ಯುವ ವೇದಿಕೆಯ ಉಸ್ತುವಾರಿಗಳೂ ಸದಸ್ಯರೂ ಆಗಿರುವ ಗಂಗಾಧರ ಕೌಡಿಚ್ಚಾರ್, ಮರಾಟಿ ಯುವ ವೇದಿಕೆಯ ನಿಯೋಜಿತ ಅಧ್ಯಕ್ಷ ಸಂದೀಪ್ ಆರ್ಯಾಪು, ಪೂರ್ವಾಧ್ಯಕ್ಷ ಹಾಗೂ ನಿಯೋಜಿತ ಕಾರ್ಯದರ್ಶಿ ನವೀನ್ ಕುಮಾರ್ ಕೆ., ನಿಯೋಜಿತ ಕೋಶಾಧಿಕಾರಿ ಗಂಗಾಧರ ಪಾಣಾಜೆ, ನಿಕಟಪೂರ್ವ ಅಧ್ಯಕ್ಷ ವಸಂತ ಆರ್ಯಾಪು, ಮಾಜಿ ಅಧ್ಯಕ್ಷ ಗೋಪಾಲ ಪಡುಮಲೆ, ಸದಸ್ಯರಾದ ಅಶೋಕ್ ಸೇರ್ತಾಜೆ, ಗಣೇಶ್ ಬಲ್ನಾಡು, ಪೂರ್ವ ಕೋಶಾಧಿಕಾರಿ ರವೀಶ್ ತಾರಿಗುಡ್ಡೆ ಉಪಸ್ಥಿತರಿದ್ದರು.

ಗೌರವಾರ್ಪಣೆ ಸ್ವೀಕರಿಸಿದ ಗಂಗಾಧರ ನಾಯ್ಕ್ ಕೂರೇಲು ಅವರ ಧರ್ಮಪತ್ನಿ ಶ್ಯಾಮಲಾ ಹಾಗೂ ಸುಪುತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಂಜುನಾಥ್ ಎನ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವ ಮೂಲಕ ಯುವ ವೇದಿಕೆ ಕೈಗೊಂಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವಾರ್ಪಣೆ ಸ್ವೀಕರಿಸಿದ ಗಂಗಾಧರ ನಾಯ್ಕ್ ಕೂರೇಲು ಅವರು ಯುವ ವೇದಿಕೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಗಂಗಾಧರ ಕೌಡಿಚ್ಚಾರ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…