ಧಾರ್ಮಿಕ

ಬಲ್ನಾಡು: ದಂಡನಾಯಕ ದೈವದ ವಾಲಸರಿ ನೇಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಏ. 28ರಂದು ಬೆಳಿಗ್ಗೆ ದಂಡನಾಯಕ ದೈವದ ವಾಲಸರಿ ನೇಮ ನಡೆಯಿತು.

maithri

balnad

ಸೋಮವಾರ ಸಂಜೆ ಭಂಡಾರದ ಮನೆಯಿಂದ ದೈವಗಳ ಭಂಡಾರ ಆಗಮಿಸಿತ್ತು. ಮಂಗಳವಾರ ಬೆಳಿಗ್ಗೆ ದೈವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದು, ವಾಲಸರಿ ಗದ್ದೆಗೆ ಭಂಡಾರ ತೆರಳಿತು.

balnad

ವಾಲಸರಿ ಗದ್ದೆಯಲ್ಲಿ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆದು, ಬಳಿಕ ದೈವಸ್ಥಾನಕ್ಕೆ ಆಗಮಿಸಲಾಯಿತು.

balnad

ಇಂದು ದೈವಸ್ಥಾನದಲ್ಲಿ ದಂಡನಾಯಕ, ಉಳ್ಳಾಲ್ತಿ, ಮಲರಾಯ, ಕಾಳರಾಹು ದೈವಗಳ ನೇಮೋತ್ಸವ ಜರುಗಲಿದೆ. ಮಲ್ಲಿಗೆ ಅರ್ಪಿಸಲು ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜೂನ್ 7ರಂದು ಸಾಮೂಹಿಕ ಸರಸ್ವತೀ ವಂದನೆ, ವಿದ್ಯಾ ಸಂಕಲ್ಪ | ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕರೆ

ಪುತ್ತೂರು: ಪ್ರಸ್ತುತ ವರ್ಷದ ಶಾಲಾ ಹಾಗೂ ಕಾಲೇಜುಗಳ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ…