tamanvi
ವಿಶೇಷಸ್ಥಳೀಯ

ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ‘ಡೈಮಂಡ್ ಫೆಸ್ಟ್’ | ವಜ್ರಾಭರಣ ಪ್ರಿಯರಿಗೆ ವಿಶೇಷ ಕೊಡುಗೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದಶಕಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ವಜ್ರಾಭರಣ ಪ್ರಿಯರಿಗಾಗಿ ವಿಶೇಷ ‘ಡೈಮಂಡ್ ಫೆಸ್ಟ್’ ಆಯೋಜಿಸಲಾಗಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಈ ವಿಶೇಷ ಉತ್ಸವದಲ್ಲಿ ಆಕರ್ಷಕ ವಿನ್ಯಾಸಗಳ ವಜ್ರಾಭರಣಗಳೊಂದಿಗೆ ವಿಶೇಷ ಎಕ್ಸ್‌ಚೇಂಜ್ ಹಾಗೂ ಬೈಬ್ಯಾಕ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

‘Diamond for Everyone’ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಿರುವ ಡೈಮಂಡ್ ಫೆಸ್ಟ್‌ನಲ್ಲಿ ವೈಯಕ್ತಿಕ ಶೈಲಿ ಹಾಗೂ ವಿವಿಧ ಸಂದರ್ಭಗಳಿಗೆ ಹೊಂದುವ ವೈವಿಧ್ಯಮಯ ವಜ್ರಾಭರಣಗಳ ಸಂಗ್ರಹವನ್ನು ಪರಿಚಯಿಸಲಾಗುತ್ತಿದೆ. Amulya Diamonds ಹಾಗೂ KISNA Diamond & Gold Jewellery ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ವಜ್ರಾಭರಣಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ವಜ್ರಾಭರಣಗಳಿಗೆ ವಿಶೇಷ ಎಕ್ಸ್‌ಚೇಂಜ್, ಬೈಬ್ಯಾಕ್ ಸೌಲಭ್ಯ

ಡೈಮಂಡ್ ಫೆಸ್ಟ್‌ನ ಪ್ರಮುಖ ಆಕರ್ಷಣೆಯಾಗಿ ವಜ್ರಾಭರಣಗಳ ಎಕ್ಸ್‌ಚೇಂಜ್‌ಗೆ 95% ವರೆಗೆ ಮೌಲ್ಯ ಹಾಗೂ ಬೈಬ್ಯಾಕ್‌ಗೆ 90% ವರೆಗೆ ಮೌಲ್ಯ ನೀಡಲಾಗುತ್ತಿದೆ. ಹಳೆಯ ವಜ್ರಾಭರಣಗಳನ್ನು ಬದಲಾಯಿಸಿ ಹೊಸ ವಿನ್ಯಾಸಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಸೌಲಭ್ಯ ವಿಶೇಷ ಅವಕಾಶವಾಗಲಿದೆ.

ಶುದ್ಧತೆ, ಪಾರದರ್ಶಕತೆ ಹಾಗೂ ಗ್ರಾಹಕ ವಿಶ್ವಾಸದ ಪರಂಪರೆಯನ್ನು ಮುಂದುವರಿಸಿಕೊಂಡು, ವಜ್ರಾಭರಣ ಖರೀದಿಯನ್ನು ಇನ್ನಷ್ಟು ಸುಲಭ ಹಾಗೂ ಮೌಲ್ಯಯುತವಾಗಿಸುವ ಉದ್ದೇಶದಿಂದ ಈ ವಿಶೇಷ ಉತ್ಸವವನ್ನು ಆಯೋಜಿಸಲಾಗಿದೆ.

ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಹಾಗೂ ಬೆಂಗಳೂರಿನ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಂಗಳಲ್ಲಿ ಗ್ರಾಹಕರು ಡೈಮಂಡ್ ಫೆಸ್ಟ್‌ನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 138