tamanvi
ಶಿಕ್ಷಣ

ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ನೂತನ ಮುಖ್ಯೋಪಾಧ್ಯಾಯರಾಗಿ ಉದಯಕುಮಾ‌ರ್ ರೈ ಎಸ್

ನೂತನ ಮುಖ್ಯಶಿಕ್ಷಕರಾಗಿ ಗಣಿತ-ವಿಜ್ಞಾನ ಸಹಶಿಕ್ಷಕರಾದ ಉದಯಕುಮಾರ್ ರೈ ಎಸ್ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿದ್ದ ಯಶೋಧರ ಎನ್ ಇವರು ಮಾರ್ಚ್ 31ರಂದು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ 1 ಏಪ್ರಿಲ್ 2025 ರಿಂದ ಪ್ರೌಢಶಾಲೆಯ ನೂತನ ಮುಖ್ಯಶಿಕ್ಷಕರಾಗಿ ಗಣಿತ-ವಿಜ್ಞಾನ ಸಹಶಿಕ್ಷಕರಾದ ಉದಯಕುಮಾರ್ ರೈ ಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. 30.03.1998ರಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡು, 28.07.1998 ರಂದು ಇಲಾಖಾ ಅನುಮೋದನೆಯೊಂದಿಗೆ ಖಾಯಂ ಸಹಶಿಕ್ಷಕರಾಗಿ 27 ವರ್ಷಗಳ ಸೇವಾ ಅನುಭವ ಹೊಂದಿರುವ ಇವರು 2023ರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. 1.6.2024 ರಿಂದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 12 ವರ್ಷಗಳಿಂದ ಭಾರತ್‌ ಸೈಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಪಂಜ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಪತ್ನಿ ದಿವ್ಯ ಆಳ್ವರವರು ಕುಂಬ್ರ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…