ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟವಾದ ಸರೋವರ ಸಂಜೀವಿನಿ ಒಕ್ಕೂಟದ ವತಿಯಿಂದ ಮೇ 8ರಂದು ‘ಪೋಷನ್ ಪಕ್ವಾಡ್ -2025’ ಕಾರ್ಯಕ್ರಮ ಒಕ್ಕೂಟದ ಕಚೇರಿಯಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಸುಜಾತಾ ರೈ ಅದ್ಯಕ್ಷತೆ ವಹಿಸಿದ್ದರು. ಆಶಾ ಕಾರ್ಯಕರ್ತೆ ಲೀಲಾ ಅವರು, ಉತ್ತಮ ಆರೋಗ್ಯಕ್ಕೆ ಬೇಕಾದ ಆಹಾರಗಳ ಬಗ್ಗೆ, ಸೊಪ್ಪು ತರಕಾರಿ ಹಣ್ಣುಹಂಪಲುಗಳ ಉಪಯುಕ್ತ ಮಾಹಿತಿ ನೀಡಿದರು.
ತಾಲೂಕು ಮೇಲ್ವಿಕರಕಿ ನಳಿನಾಕ್ಷಿ ಅವರು ಗರ್ಭಿಣಿಯರ ಆರೋಗ್ಯ – ಆಹಾರ ಹಾಗೂ ಉತ್ತಮ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಪೌಷ್ಟಿಕ ಆಹಾರ ತಯಾರಿಸಿದರಿಗೆ ಇದೇ ಸಂದರ್ಭ ಬಹುಮಾನ ನೀಡಲಾಯಿತು. ಇದರ ಜೊತೆಗೆ ಮನೋರಂಜನೆ ಆಟ ನಡೆಸಲಾಯಿತು.
ಗ್ರಾಮೀಣ ರೈತ ಸಂತೆ ನಡೆಸಿದ್ದು, ಸಾರ್ವಜನಿಕರಿಂದ ಉತ್ತ. ಪ್ರತಿಕ್ರಿಯೆ ವ್ಯಕ್ತವಾಯಿತು. ಜನಸುರಕ್ಷಾ ಏಂಜಲ್ ಅಕೌಂಟ್ ಬಗ್ಗೆ ಕೆನರಾ ಬ್ಯಾಂಕ್ ನ ದೀಪ ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಘಟಕದ ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.