tamanvi
ಸ್ಥಳೀಯ

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಬೆಂಗಳೂರಿನಲ್ಲಿ ಜನತಾ ಅವಾರ್ಡ್ 2026

ಈ ಸುದ್ದಿಯನ್ನು ಶೇರ್ ಮಾಡಿ

ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರನ್ನು ಇತ್ತೀಚೆಗೆ ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯು ನಲ್ಲಿ ಜನತಾ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಹಿನ್ನೆಲೆಯಲ್ಲಿ ಜನತಾ ನ್ಯೂಸ್ ಮ್ಯಾನೇಜಿಂಗ್ ಡೈರೆಕ್ಟರ್ ಆರ್ಯನ್ ಭಾರದ್ವಾಜ್ ಅವರು ಪೇಟ ಶಾಲು ತೊಡಿಸಿ ಹಾರ ಟ್ರೋಫಿ ಪ್ರಶಸ್ತಿ ಪತ್ರವನ್ನು ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜನತಾ ನ್ಯೂಸ್ ಕನ್ನಡ ಮುಖ್ಯ ಸಂಪಾದಕ, ಕರ್ನಾಟಕ ಯುವಶಕ್ತಿಯ ರಾಜ್ಯಾಧ್ಯಕ್ಷ ಕೆ ಎಸ್ ಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. doczee ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಹ  ಸಂಸ್ಥಾಪಕಿ ಮೋನಿಷಾ ಆರ್ಯನ್ ಭಾರದ್ವಾಜ್ ಬೆಂಗಳೂರು, ಎಕ್ಸ ರೀಜನಲ್ ಮ್ಯಾನೇಜರ್ ಆಫ್ ರಿಲಯನ್ಸ್ ಸೆಲ್ಯೂಲೋಸ್ ಪ್ರಾಡಕ್ಟ್ಸ್ ಲಿಮಿಟೆಡ್’ನ ಪಿ ಎಸ್ ಭಟ್ ನೂಜಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋಭಾ ಹಾಗೂ ಹರಿಚೇತ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 133