ರಾಜ್ಯ ವಾರ್ತೆ

ಬೆಂಗಳೂರು ಕಂಬಳದ ಬಳಿಕ ಇನ್ನು ಮೈಸೂರು ಕಂಬಳ? ಶಾಸಕ ಅಶೋಕ್ ರೈಗೆ ಕರೆ ಮಾಡಿದ ಟ್ರಬಲ್ ಶೂಟರ್!

GL
ರೈಗಳೆ… ನೀವು ದಸರಾಗೆ ಮೈಸೂರಲ್ಲಿ‌ಕಂಬಳ ಮಾಡ್ತೀರಾ? ಬೆಂಗಳೂರಲ್ಲಿ‌ಮಾಡಿದ ಹಾಗೆ ನಮ್ಮ ಮೈಸೂರಲ್ಲೂ ಮಾಡ್ತೀರಾ?

ಈ ಸುದ್ದಿಯನ್ನು ಶೇರ್ ಮಾಡಿ


ಪುತ್ತೂರು: ರೈಗಳೆ… ನೀವು ದಸರಾಗೆ ಮೈಸೂರಲ್ಲಿ‌ಕಂಬಳ ಮಾಡ್ತೀರಾ? ಬೆಂಗಳೂರಲ್ಲಿ‌ಮಾಡಿದ ಹಾಗೆ ನಮ್ಮ ಮೈಸೂರಲ್ಲೂ ಮಾಡ್ತೀರಾ? ನಮ್ಮ‌ಪೂರ್ಣ ಸಹಕಾರ ಇದೆ ..ಹೆಂಗೆ? ಇದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮೊಬೈಲ್ ಕರೆ ಮಾಡಿ ವಿನಂತಿಸಿದ ಪರಿ.

chennai-shopping
maithri

ಮುಂದಿನ‌ ದಸರಾ ವೇಳೆಗೆ ಮೈಸೂರಲ್ಲಿ ಕಂಬಳ ಮಾಡಿದ್ರೆ ಚೆನ್ನಾಗಿರುತ್ತದೆ. ನೀವು ಸೇರಿಕೊಂಡ್ರೆ ಕಂಬಳಕ್ಕೆ ಮೆರುಗು ಬರ್ತದೆ, ಹೇಗೆ ಮಾಡಬಹುದ? ಎಂದು ಡಿಕೆಶಿ ಕೇಳಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ಪ್ರಯತ್ನ ಮಾಡೋಣ. ಬೇರೆ ಬೇರೆ ಕಡೆಗಳಿಂದಲೂ ನಮ್ಮಲ್ಲಿ‌ ಕಂಬಳ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ನಗುತ್ತಲೇ ಉತ್ತರಿಸಿದ ಶಾಸಕರು ಕಂಬಳ ಮಾಡುವುದಿಲ್ಲ ಎಂದು ಹೇಳದೆ ಉಪ ಮುಖ್ಯಮಂತ್ರಿಯವರಲ್ಲಿ ನೋಡುವ ಎಂಬ ಉತ್ತರವನ್ನು ನೀಡಿದ್ದಾರೆ.

ಡಿಕೆಶಿ ಅಥವಾ ಸರಕಾರ ಒತ್ತಾಯ ಮಾಡಿದ್ದಲ್ಲಿ‌ ಮುಂದಿನ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರಲ್ಲೂ ಕಂಬಳ ಕೋಣಗಳು ಸದ್ದು ಮಾಡಬಹುದು.‌ ಕರಾವಳಿಯ ಕಂಬಳಕ್ಕೆ ಇನ್ನು ಎಲ್ಲಿಲ್ಲದ ಬೇಡಿಕೆ ಬರುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಯಾವುದೇ ಸಹಕಾರಿ ಸಂಘದಲ್ಲೂ ಕೃಷಿಕರಿಗೆ ಈ ಸಾಲಸಿಗುತ್ತಿಲ್ಲ; ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ರೈ

ಪುತ್ತೂರು: ರಾಜ್ಯ ಸರಕಾರವು ಕೃಷಿಕರ, ರೈತರ ಪರವಾಗಿದೆ, ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ…