ಪುತ್ತೂರು: 75 ಪೂರೈಸಿದ ಸಂಭ್ರಮದಲ್ಲಿರುವ ವರ್ಷಗಳ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯನ್ನು ಮುನ್ನಡೆಸುವ ನೇತೃತ್ವವನ್ನು ಪುತ್ತೂರು ದ್ವಾರಕಾ ಪ್ರತಿಷ್ಠಾನ ವಹಿಸಿಕೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವನ್ನೂ ಆರಂಭ ಮಾಡಲಿದ್ದೆವೆ ಎಂದು ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಇದರ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟೆ ನರಸಿಂಹ ಭಟ್ ಮತ್ತು ಬಾಲಕೃಷ್ಣ ಭಟ್ ಎಂಬವರ ನೇತೃತ್ವದಲ್ಲಿ ಮುನ್ನಡೆದುಕೊಂಡು ಬಂದಿರುವ ಶ್ರೀಕೃಷ್ಣ ವಿದ್ಯಾಸಂಸ್ಥೆಯು, ಸ್ಥಳೀಯ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದೀಗ ದ್ವಾರಕಾ ಪ್ರತಿಷ್ಠಾನವು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳನ್ನು ನಡೆಸಲು ಮುಂದಾಗಿದ್ದು, ಸುಸಂಸ್ಕೃತ ಸಮಾಜ ಕಟ್ಟುವ ನಿಟ್ಟಿನಲ್ಲಿ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಕೇವಲ ಸರ್ಟಿಫಿಕೇಟ್ ಪಡೆಯುವುದು ಶಿಕ್ಷಣವಲ್ಲ. ಶಿಕ್ಷಣದ ಮೂಲಕ ಮಕ್ಕಳು ಸಮಾಜಕ್ಕೆ ಆಸ್ತಿಯಾಗಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಕೊಡಬೇಕೆನ್ನುವ ಕನಸಿನೊಂದಿಗೆ ಈಗಿನ ಹೊಸ ಆಡಳಿತದೊಂದಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಲಿದ್ದೇವೆ. ಮುಂದಿನ ದಿನಗಳಲ್ಲಿ ಹಲವು ಯೋಜನೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಕೆ.ಜಿ. ಶಿಕ್ಷಣದಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲಿದ್ದೇವೆ. ಹಾಲಿ ವಿದ್ಯಾಸಂಸ್ಥೆಯಲ್ಲಿ 274 ವಿದ್ಯಾರ್ಥಿಗಳಿದ್ದು, ಇದೀಗ ಈ ಶೈಕ್ಷಣಿಕ ವರ್ಷದಲ್ಲಿ 50 ರಿಂದ 100 ವಿದ್ಯಾರ್ಥಿಗಳು ಹೆಚ್ಚು ಸೇರ್ಪಡೆಗೊಂಡಿದ್ದಾರೆ. 75 ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ ಎಂದರು.
ಸದ್ಯಕ್ಕೆ ನಿಂತಿರುವ ಪಿಯು ಶಿಕ್ಷಣವನ್ನು ಮುಂದಿನ ಎರಡು ವರ್ಷಗಳಲ್ಲಿ ಪುನರಾರಂಭಿಸಲಿದ್ದೇವೆ. ಮುಂದಿನ ಮಳೆಗಾಲದ ಸಂದರ್ಭದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಗೋಪಾಲಕೃಷ್ಣ ಭಟ್ ಹೇಳಿದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ವಿಘ್ನೇಶ್ ಮಾತನಾಡಿ, ಸುಸಂಸ್ಕೃತ, ಸಮಾಜದ ಜವಾಬ್ದಾರಿಯ ವಿದ್ಯಾರ್ಥಿಗಳನ್ನು ಅಲ್ಲಿ ಬೆಳೆಸಬೇಕೆಂಬ ಮುಖ್ಯ ಉದ್ದೇಶದಿಂದ ದ್ವಾರಕಾ ಪ್ರತಿಷ್ಠಾನವು ಈ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡಿದೆ. ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ, ಮೌಲ್ಯವರ್ಧನ ಶಿಕ್ಷಣ ಮತ್ತು ಸಾಂಪ್ರಾದಾಯಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕಬೇಕೆನ್ನುವುದು ನಮ್ಮ ಮಹದಾಸೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಳಿಗೆ ಗುರುಕುಲ ಮಾದರಿಯ ಶಿಕ್ಷಣ, ಕೃಷಿಗೆ ಸಂಬಂಧಿಸಿದ ಚಟುವಟಿಕೆ ಸಹಿತ ವಿದ್ಯಾರ್ಥಿಗಳ ಜೀವನ ಶೈಲಿಯ ಬದಲಾವಣೆಯ ಶಿಕ್ಷಣ ನೀಡಲಿದ್ದೇವೆ ಎಂದರು.
ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಅಮೃತಕೃಷ್ಣ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ. ಇದರ ಕಾರ್ಪೋರೇಶನ್ ವಿಭಾಗದ ಮುಖ್ಯಸ್ಥ ದುರ್ಗಾ ಗಣೇಶ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಯ ನೇತೃತ್ವ ವಹಿಸಿಕೊಂಡ ದ್ವಾರಕಾ ಪ್ರತಿಷ್ಠಾನ | 75ರ ಸಂಭ್ರಮಕ್ಕೆ ವರ್ಷವಿಡೀ ಕಾರ್ಯಕ್ರಮ, ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮವೂ ಆರಂಭ
What's your reaction?
- 894c
- 794cc
- 7ai technology
- 7ajjavara
- 7alwas
- 7apology
- 7artificial intelegence
- 7avg
- 7belthangady-provocative-speech-case-conviction
- 7bihar minister
- 6bjp
- 6bjp leader
- 6bjp national president
- 6bt ranjan
- 6co-operative
- 6coastal
- 6Court convicts accused in provocative speech case
- 6crime
- 6crime news
- 6cyclothon
- 5darmasthala
- 5death news
- 5dust bin
- 5education
- 5fraud
- 5gl
- 5gods own country
- 5gold
- 5google for education
- 4independence
- 4jewel
- 4jewellers
- 4jnana vikasa
- 4karnataka state
- 4kerala village
- 4kukke - kollur temple
- 4lokayuktha
- 4lokayuktha raid
- 3Mangalore
- 3manipal
- 3minister krishna bairegowda
- 3mla ashok rai
- 3mohan alwa
- 3mudubidre
- 3nidana news
- 3nirvathu mukku
- 3nitin nabin
- 2police
- 2ptr tahasildar
- 2puttur
- 2puttur news
- 2puttur tahasildar
- 2republic
- 2revenue
- 2revenue department
- 2revenue minister
- 1school
- 1senior citizen
- 1silver
- 1society
- 1sowmya
- 1students
- 1tahasildar
- 1tahasildar absconded
- 1teachers
- 0tour
- 0trending
- 0udupi
- 0wastage
Related Posts
ನಸುಕಿನ ಜಾವ ಪುತ್ತೂರು ರಸ್ತೆಯಲ್ಲಿ ಕಾಡುಕೋಣಗಳು: ವಾಹನ ಸವಾರರಲ್ಲಿ ಆತಂಕ
ಪುತ್ತೂರು: ನಗರದ ಬೈಪಾಸ್ ರಸ್ತೆಯ ದುರ್ಗಮ್ಮ–ದೇರಣ್ಣ ಹಾಲ್ ಸಮೀಪ ಸೆ.11ರ ನಸುಕಿನ ಜಾವ ಎರಡು…
ಕಡಬ: ತಡರಾತ್ರಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ – 37 ಪ್ರಯಾಣಿಕರು ಪಾರು
ಕಡಬ: ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ತಡರಾತ್ರಿ…
ಅ.17ರಂದು ಪುತ್ತೂರಿನಲ್ಲಿ ‘ಪಿಲಿಗೊಬ್ಬು 2026’: ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಕರಾವಳಿಯ ಸಾಂಪ್ರದಾಯಿಕ ಹುಲಿವೇಷದ ಸೊಬಗನ್ನು ಅನಾವರಣಗೊಳಿಸುವ ‘ಪುತ್ತೂರುದ…
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ 20ರ ಹರೆಯದ ಯುವಕ ಮೃತ್ಯು
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು…
ವಿಟ್ಲ: ‘ಸ್ವರ ಸಿಂಚನ ಸಂಗೀತೋತ್ಸವ–2026’ : ಡಾ. ಈಶ್ವರ ಭಟ್ ದಂಪತಿಗೆ ಸ್ವರ ಸಿಂಚನ ಪುರಸ್ಕಾರ
ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ಹಾಗೂ ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ‘ಸ್ವರ…
ವಂದೇ ಭಾರತ್ಗೆ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ: ರೈಲ್ವೆ ಮಂಡಳಿಗೆ ಡಾ. ಅರುಣಾ ಶ್ಯಾಮ್ ಮನವಿ..!!
ಪುತ್ತೂರು: ಬೆಂಗಳೂರು–ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್…
ಪುತ್ತೂರು ದಸರಾಕ್ಕೆ ಅದ್ದೂರಿ ಚಾಲನೆ: 92ನೇ ವರ್ಷದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ…
ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ | ಹುತಾತ್ಮರಾದ ಹಸಿರು ಯೋಧರ ಸ್ಮರಣೆ ಜೊತೆಗೆ ಅರಣ್ಯ ಸಂಪತ್ತಿನ ಅರಿವು ಅಗತ್ಯ: ಶ್ರೀಧರ್ ಪಿ.
ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪುತ್ತೂರು ತಾಲೂಕು ಘಟಕ ಹಾಗೂ ದ. ಕ. ಜಿಲ್ಲಾ…
ಪುತ್ತೂರು: (ಸೆ.05) ಪ್ರಜಾಸೇವೆ ಆಂದೋಲನ ಸಭೆ..!!
ಪುತ್ತೂರು: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ…
ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಹಾಲು ಉತ್ಪಾದಕರ ಸಹಕಾರಿ ಸಂಘದ ಭೇಟಿ
ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ…

















