tamanvi
ಕರಾವಳಿಸ್ಥಳೀಯ

ಕಡಬ: ಪಿಗ್ಮಿ ಸಂಗ್ರಾಹಕ ಸಾವು!

D_shiva_bhat
ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ಅಘಾತಕಾರಿ ಘಟನೆ. ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡರ ಪುತ್ರ ಎಡಮಂಗಲ ಸಿ.ಎ.ಬ್ಯಾಂಕಿನ ಪಿಗ್ಗಿ ಸಂಗ್ರಾಹಕ ಸೀತಾರಾಮ ಗೌಡ(58) ಮೃತಪಟ್ಟ ಸವಾರ.

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ಚಲಿಸುತ್ತಿದ್ದ ಸ್ಕೂಟಿ ಮೇಲೆ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ದೂಪದ ಮರ ಬಿದ್ದು ಸ್ಕೂಟಿ ಸವಾರ ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡರ ಪುತ್ರ ಎಡಮಂಗಲ ಸಿ.ಎ.ಬ್ಯಾಂಕಿನ ಪಿಗ್ಮಿ  ಸಂಗ್ರಾಹಕ ಸೀತಾರಾಮ ಗೌಡ(58) ಮೃತಪಟ್ಟರು.

ದೀಪಾವಳಿ ಪ್ರಯುಕ್ತ ಮನೆಯಲ್ಲಿ ದೈವಕ್ಕೆ ಹರಕೆ ಇದ್ದುದರಿಂದ ಕೋಳಿ ತರಲು ಕಡಬಕ್ಕೆ ಹೋಗಿ ತನ್ನ ಮನೆಗೆ ಹಿಂತಿರುಗುವಾಗ ರಸ್ತೆ ಬದಿಯ ಭಾರಿ ಗಾತ್ರದ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಸವಾರ ಸೀತಾರಾಮ ಗೌಡರ ತಲೆ ಮೇಲೆಯೇ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 188