tamanvi
ದೇಶ

ಆನ್’ಲೈನ್ ಗೇಮಿಂಗಿಗೆ ಕೇಂದ್ರದ ಅಂಕುಶ!! ಆತ್ಮಹತ್ಯೆ, ಸಾಲಬಾಧೆಯ ಮೊರೆ ಹೋಗುತ್ತಿರುವ ಯುವಕರ ರಕ್ಷಣೆಗೆ ಮುಂದಾದ ಕೇಂದ್ರ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ದೇಶದ ಯುವಜನತೆ ಆನ್ಲೈನ್ ಗೇಮ್ಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ದುಷ್ಪರಿಣಾಮಗಳು ಕೂಡ ಗಂಭೀರವಾಗಿ ಹೊರಹೊಮ್ಮುತ್ತಿರುವುದು ಗಮನಾರ್ಹವಾಗಿದೆ. ಹಳ್ಳಿಗಳ ಮೂಲೆಯಲ್ಲಿಯೂ ಗೇಮಿಂಗ್ ವ್ಯಸನ ವ್ಯಾಪಿಸಿರುವುದರಿಂದ ಅಪ್ರಾಪ್ತರು ಸೇರಿದಂತೆ ಹಲವರು ಹಣ ಹೂಡಿ ನಷ್ಟ ಅನುಭವಿಸುವುದರ ಜೊತೆಗೆ ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣಗಳಿಗೂ ಕಾರಣವಾಗುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಆನ್ಲೈನ್ ಗೇಮಿಂಗ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು, ಮೇ 1ರಿಂದ ಇದು ದೇಶದಾದ್ಯಂತ ಅನ್ವಯವಾಗಲಿದೆ.

ಕಾಯ್ದೆಯಡಿ ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಎಂಬ ಕೇಂದ್ರ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕಾಗಿದೆ. Dream11, MPL, WinZO ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಹೊಸ ನಿಯಮಗಳಿಗೆ ಅನುಗುಣವಾಗಿ ಲೈಸೆನ್ಸ್ ಪಡೆಯಬೇಕಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ ಗೇಮ್ಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಸ್ಪೋರ್ಟ್ಸ್ಗಳನ್ನು ಸಂಪೂರ್ಣ ಕಾನೂನುಬದ್ಧವಾಗಿ ಪರಿಗಣಿಸಲಾಗಿದ್ದು, ಕೌಶಲ್ಯಾಧಾರಿತ ಗೇಮ್ಗಳಿಗೆ ಲೈಸೆನ್ಸ್ ಕಡ್ಡಾಯವಾಗಿದೆ. ಆದರೆ ಬೆಟ್ಟಿಂಗ್ ಆಧಾರಿತ ಗೇಮ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆನ್ಲೈನ್ ಕ್ಯಾಸಿನೊ ಹಾಗೂ 1XBet ಮಾದರಿಯ ವೇದಿಕೆಗಳು ನಿಯಮದಡಿಯಲ್ಲಿ ಬ್ಯಾನ್ ಆಗಲಿವೆ.

ಅಪ್ರಾಪ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಕ್ಕೆ ಕೇವಲ ಮೂರು ಗಂಟೆಗಳಷ್ಟೇ ಗೇಮ್ ಆಡಲು ಅವಕಾಶವಿದ್ದು, ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಗೇಮಿಂಗ್ ಸಂಪೂರ್ಣ ನಿಷೇಧಿಸಲಾಗಿದೆ. ಹಣದ ಗೇಮ್ಗಳಿಗೆ ಆಧಾರ್ ಆಧಾರಿತ ಕೆವೈಸಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ತಿಂಗಳಿಗೆ 10,000 ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಜೊತೆಗೆ ಪೋಷಕರ ಒಟಿಪಿ ಅನುಮತಿ ಇಲ್ಲದೆ ಯಾವುದೇ ಹಣ ವ್ಯವಹಾರ ನಡೆಸಲು ಅವಕಾಶ ಇರುವುದಿಲ್ಲ.

ತೆರಿಗೆ ಸಂಬಂಧಿತ ನಿಯಮಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಗೇಮಿಂಗ್ ಡೆಪಾಸಿಟ್ ಮೇಲೆ 28 ಶೇಕಡಾ ಜಿಎಸ್ಟಿ ಮುಂದುವರಿಯಲಿದ್ದು, 10,000 ರೂಪಾಯಿಗಿಂತ ಹೆಚ್ಚಿನ ಮೊತ್ತ ಗೆದ್ದರೆ 30 ಶೇಕಡಾ ಟಿಡಿಎಸ್ಕಡಿತಗೊಳ್ಳಲಿದೆ.

ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿ ಉಲ್ಲಂಘನೆಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗುವುದಲ್ಲದೆ, ಮರುಕಳಿಸಿದರೆ ಐದು ಕೋಟಿ ರೂಪಾಯಿ ದಂಡದ ಜೊತೆಗೆ ಕಂಪನಿಯ ಸಿಇಓಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ವ್ಯವಸ್ಥೆ ಇದೆ. ಇದೇ ವೇಳೆ ಬ್ಯಾನ್ ಮಾಡಲಾದ ಗೇಮ್ಗಳ ಜಾಹೀರಾತು ಮಾಡಿದ ಸೆಲೆಬ್ರಿಟಿಗಳು ಮತ್ತು ಇನ್ಫ್ಲುಯೆನ್ಸರ್ಗಳಿಗೂ ದಂಡ ಹಾಗೂ ನಿಷೇಧ ವಿಧಿಸಲಾಗುತ್ತದೆ.

ಬಳಕೆದಾರರ ಮೇಲೂ ನಿಯಂತ್ರಣ ಹೇರಲಾಗಿದೆ. ಬ್ಯಾನ್ ಮಾಡಲಾದ ವೆಬ್ಸೈಟ್ಗಳನ್ನು ಬಳಸಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಪದೇಪದೇ ತಪ್ಪು ಮಾಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ಅಕ್ರಮ ಗೇಮ್ಗಳಿಗೆ ಹಣ ವರ್ಗಾವಣೆ ಮಾಡಿದರೆ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ.

ಇದೇ ವೇಳೆ ಕರ್ನಾಟಕದಲ್ಲಿ ಹಿಂದಿನ ಬೆಟ್ಟಿಂಗ್ ಕಾಯ್ದೆಯನ್ನು ಹೈಕೋರ್ಟ್ ರದ್ದು ಮಾಡಿರುವುದರಿಂದ, ಈಗ ಹೊಸ ಕೇಂದ್ರ ಕಾಯ್ದೆಯೇ ಅನ್ವಯವಾಗಲಿದೆ. ಬೆಂಗಳೂರು ನಗರವು ದೇಶದ ಪ್ರಮುಖ ಗೇಮಿಂಗ್ ಹಬ್ ಆಗಿದ್ದು, ಇಲ್ಲಿ 200ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಮೇ 1ರೊಳಗೆ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ.

ಹೊಸ ಕಾಯ್ದೆಯಡಿ ಎಲ್ಲಾ ಗೇಮ್ಗಳಿಗೆ ನೋಂದಣಿ ಕಡ್ಡಾಯವಾಗಿದ್ದು, ಅನುಮೋದಿತ ವೇದಿಕೆಗಳಿಗೆ 10 ವರ್ಷಗಳವರೆಗೆ ಮಾನ್ಯವಾಗುವ ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ. ಪಾವತಿ, ಡೇಟಾ ನಿರ್ವಹಣೆ ಮತ್ತು ಪಾರದರ್ಶಕತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬಳಕೆದಾರರಿಗೆ ಎರಡು ಹಂತದ ದೂರು ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮೊದಲು ಗೇಮಿಂಗ್ ಕಂಪನಿಗೆ ದೂರು ಸಲ್ಲಿಸಲು ಅವಕಾಶವಿದ್ದು, ಅಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಸಂಬಂಧಿತ ಪ್ರಾಧಿಕಾರ ಮತ್ತು MeitY ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. 30 ದಿನಗಳೊಳಗೆ ಸಮಸ್ಯೆಯನ್ನು ಪರಿಹರಿಸುವುದು ಕಡ್ಡಾಯವಾಗಿದೆ.

ಒಟ್ಟಾರೆ, ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆ ಯುವಜನತೆಯನ್ನು ರಕ್ಷಿಸುವುದರ ಜೊತೆಗೆ ಗೇಮಿಂಗ್ ಕ್ಷೇತ್ರದಲ್ಲಿ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…

ಬಾಲಿವುಡ್ ನಟರು, ಕ್ರಿಕೆಟ್ ತಾರೆಯರು ಚುನಾವಣಾ ಆಖಾಡಕ್ಕೆ!! | ನಡುರಾತ್ರಿಯ ಬಿಜೆಪಿ ಸಭೆ ನಿರ್ಣಯಿಸಿದ ಆ ಸೆಲಬ್ರಿಟಿಗಳು ಯಾರು?

ನವದೆಹಲಿ: ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌…