ದೇಶ

ಪಶ್ಚಿಮ ಬಂಗಾಳ: ಸಾರ್ವಜನಿಕ ದರ್ಶನಕ್ಕೆ ತೆರೆದುಕೊಂಡ 15 ವರ್ಷದಿಂದ ಮುಚ್ಚಿದ್ದ ದುರ್ಗಾ ದೇವಾಲಯ!

GL

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಗೆಲುವು ಪಡೆದುಕೊಳ್ಳುತ್ತಿದ್ದಂತೆ ಅಸನ್ಸೋಲ್‌ನ ಬಾಸ್ಟಿನ್ ಬಜಾರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ದುರ್ಗಾ ದೇವಸ್ಥಾನವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ದೇಗುಲದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸ್ಥಳೀಯ ಕ್ಷೋಭೆಯ ಬಳಿಕ ಅಲ್ಲಿನ ಆಡಳಿತ ದೇವಸ್ಥಾನವನ್ನು ದೈನಂದಿನ ಧಾರ್ಮಿಕ ವಿಧಿಗಳಿಗೆ ನಿರ್ಬಂಧ ಹೇರಿತ್ತು. ಪ್ರಮುಖ ಹಬ್ಬಗಳ ದಿನ ಮಾತ್ರ ಪೂಜೆಗೆ ತೆರೆಯುತ್ತಿತ್ತು ಎಂದು ತಿಳಿದುಬಂದಿದೆ.

maithri

ಭರವಸೆ ಈಡೇರಿಸಿದ ಕೃಷ್ಣೇಂದು ಮುಖರ್ಜಿ

ಕಳೆದ ಒಂದೂವರೆ ದಶಕದಿಂದ ಈ ದೇವಸ್ಥಾನವು ದುರ್ಗಾ ಪೂಜೆ, ಕಾಳಿ ಪೂಜೆ ಮತ್ತು ಲಕ್ಷ್ಮಿ ಪೂಜೆಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಾತ್ರ ತೆರೆಯಲ್ಪಡುತ್ತಿತ್ತು. ಉಳಿದ ದಿನಗಳಲ್ಲಿ ದೇಗುಲದ ಬಾಗಿಲು ಮುಚ್ಚಿರುತ್ತಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣೇಂದು ಮುಖರ್ಜಿ ಅವರು, “ತಾವು ಗೆದ್ದರೆ ವರ್ಷದ 365 ದಿನಗಳೂ ದೇಗುಲ ತೆರೆದಿರುವಂತೆ ನೋಡಿಕೊಳ್ಳುವುದಾಗಿ” ಮತದಾರರಿಗೆ ಭರವಸೆ ನೀಡಿದ್ದರು. ಅದರಂತೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಾಸ್ಟಿನ್ ಬಜಾರ್‌ಗೆ ಭೇಟಿ ನೀಡಿದ ಮುಖರ್ಜಿ ಅವರು, ಸ್ವತಃ ದೇಗುಲದ ಬೀಗ ತೆಗೆಯುವ ಮೂಲಕ ತಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.

ಭಕ್ತರ ದಂಡು – ಆಡಳಿತ ಮಂಡಳಿ ಹದ್ದಿನ ಕಣ್ಣು

ದೇಗುಲ ಪೂರ್ಣ ಪ್ರಮಾಣದಲ್ಲಿ ಪುನಾರಂಭಗೊಂಡ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದಶಕಗಳ ನಂತರ ನಿರಂತರ ಪೂಜಾ ಕೈಂಕರ್ಯಗಳು ಆರಂಭವಾಗಿರುವುದು ಭಕ್ತರಲ್ಲಿ ಸಡಗರ ಮೂಡಿಸಿದೆ. ಆದರೆ, ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿವೆ.

ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಭದ್ರತೆ

ಅಸನ್ಸೋಲ್‌ನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬಾಸ್ಟಿನ್ ಬಜಾರ್ ಮಿಶ್ರ ವಸತಿ ಪ್ರದೇಶವಾಗಿದೆ. ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೇಂದ್ರ ಪಡೆಗಳನ್ನು ದೇಗುಲದ ಬಿಗು ಕಾವಲನ್ನು ಹೊರಗೆ ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆನ್’ಲೈನ್ ಗೇಮಿಂಗಿಗೆ ಕೇಂದ್ರದ ಅಂಕುಶ!! ಆತ್ಮಹತ್ಯೆ, ಸಾಲಬಾಧೆಯ ಮೊರೆ ಹೋಗುತ್ತಿರುವ ಯುವಕರ ರಕ್ಷಣೆಗೆ ಮುಂದಾದ ಕೇಂದ್ರ!

ದೇಶದ ಯುವಜನತೆ ಆನ್‌ಲೈನ್ ಗೇಮ್‌ಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ…

ಮಧ್ಯಪ್ರಾಚ್ಯ ಉದ್ವಿಗ್ನತೆ : ಸಂಕಷ್ಟದಲ್ಲಿನ ಕನ್ನಡಿಗರ ನೆರವಿಗೆ ಉಡುಪಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

ಮಂಗಳೂರು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ಅಂತರಾಷ್ಟ್ರೀಯ…