tamanvi
ಧಾರ್ಮಿಕ

ತೊಟ್ಟಿಲಕಯ ಉಳ್ಳಾಲ್ತಿ ಮೂಲಸ್ಥಾನದಲ್ಲಿ ಚಂಡಿಕಾಯಾಗ ಪೂರ್ಣಾಹುತಿ ನೆರವೇರಿಸಿದ ಶೃಂಗೇರಿ ಶ್ರೀ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಉಪಸ್ಥಿತಿಯಲ್ಲಿ ಕರ್ಕುಂಜ ತೊಟ್ಟಿಲಕಯದಲ್ಲಿ ಗುರುವಾರ ಬೆಳಿಗ್ಗೆ ಚಂಡಿಕಾಯಾಗ ಪೂರ್ಣಾಹುತಿಗೊಂಡಿತು.

maithri

ಬುಧವಾರ ರಾತ್ರಿ ಪುತ್ತೂರಿಗೆ ಆಗಮಿಸಿದ ಶೃಂಗೇರಿ ಶ್ರೀಗಳನ್ನು ಪೋಳ್ಯದಲ್ಲಿ ಸ್ವಾಗತಿಸಿ, ಪುತ್ತೂರಿಗೆ ಕರೆತರಲಾಯಿತು. ಬಪ್ಪಳಿಗೆಯಿಂದ ಪೂರ್ಣಕುಂಭ ಸ್ವಾಗತದಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಆವರಣಕ್ಕೆ ಕರೆತರಲಾಯಿತು.

ಚಂದ್ರಮೌಳೀಶ್ವರ ಪೂಜೆ:

ಅಂಬಿಕಾ ಸಮೂಹ ಸಂಸ್ಥೆಗಳ ಆವರಣದಲ್ಲಿ ಶ್ರೀಗಳು ಚಂದ್ರಮೌಳೀಶ್ವರ ಪೂಜೆ ನೆರವೇರಿಸಿದರು.

ಚಂಡಿಕಾ ಯಾಗ:

ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನವರ ಮೂಲಕ್ಷೇತ್ರ ಕರ್ಕುಂಜ ತೊಟ್ಟಿಲಕಯ. ಉಳ್ಳಾಲ್ತಿ ಇಲ್ಲಿಯೇ ಉದ್ಭವಿಸಿ, ಮುಂದೆ ಬಲ್ನಾಡಿನಲ್ಲಿ ಆರಾಧನೆ ಕೈಗೊಂಡಳು ಎಂದು ಪ್ರತೀತಿ. ಶೃಂಗೇರಿ ಶ್ರೀಗಳ ಭೇಟಿ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ತೊಟ್ಟಿಲಕಯದಲ್ಲಿ ಚಂಡಿಕಾಯಾಗ ನೆರವೇರಿತು.

ಪಾದುಕಾ ಪೂಜೆಗೆ ಸಿದ್ಧತೆ:

ಅಂಬಿಕಾ ಸಮೂಹ ಸಂಸ್ಥೆಗಳ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಪುತ್ತೂರಿಗೆ ಭೇಟಿ ನೀಡಿರುವ ಶೃಂಗೇರಿ ಶ್ರೀಗಳ ಪಾದುಕಾ ಪೂಜೆಗೆ ಸಂಸ್ಥೆಯ ಆವರಣದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಕೆಲವೇ ಹೊತ್ತಿನಲ್ಲಿ ವಿವಿಧ ಸಮುದಾಯಗಳಿಂದ ಪಾದುಕಾ ಪೂಜೆ ನೆರವೇರಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts