tamanvi
ಕರಾವಳಿ

ಕೊಡಾಜೆ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್, ಅರಿ ಅಂಬ್ರೋಯ್ಡರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ, ಮಾಹಿತಿ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

ನೇರಳಕಟ್ಟೆಯ ಭಾರತ್ ವೆಹಿಕಲ್ ಬಜಾರ್ ನ ಸಹಸಂಸ್ಥೆ ಕೊಡಾಜೆ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಅಂಬ್ರೋಯ್ಡರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಏ. 25ರಂದು ಪ್ರಮಾಣಪತ್ರ ವಿತರಣಾ ಸಮಾರಂಭ ಹಾಗೂ‌ ಮಾಹಿತಿ ಕಾರ್ಯಾಗಾರ ನಡೆಯಿತು.

ಸಮಾರಂಭ ಉದ್ಘಾಟಿಸಿದ ಮಾಣಿ‌ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ ಮಾತನಾಡಿ, ಬಹಳ ವ್ಯವಸ್ಥಿತವಾದ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿದೆ. ಎಲ್ಲಾ ಕಡೆಗಳಲ್ಲಿ ಟೈಲರಿಂಗ್ ಕ್ಲಾಸ್ ನಡೆಯುತ್ತ,. ಸರ್ಟಿಫಿಕೇಟ್ ಕೊಡ್ತಾರೆ. ಆದರೆ ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡಿ ಸರ್ಟಿಫಿಕೆಟ್ ನೀಡುತ್ತಿರುವುದು ಈ ಭಾಗದಲ್ಲಿ ಇದು ಪ್ರಥಮ. ಭಾರತ್ ವಹಿಕಲ್ ಬಝಾರ್ ಕೇವಲ ವ್ಯವಹಾರಕ್ಕೆ ಸೀಮಿತವಾಗದ ಸಮಾಜಮುಖಿಯಾಗಿ ಬೆಳೆಯುತ್ತಿದೆ. ಈ ಭಾಗದ ಜನರ ಮನಗೆಲ್ಲುವಲ್ಲಿ ಭಾರತ್ ಗ್ರೂಪ್ಸ್ ಸಫಲವಾಗಿದೆ ಎಂದರು.

bharath

ಸಮಾಜದ ಅಶಕ್ತರನ್ನು ಮೇಲಕ್ಕೆತ್ತುವ ಕೆಲಸ ಭಾರತ್ ವೆಹಿಕಲ್ ಬಝಾರ್ ಸಂಸ್ಥೆಯಿಂದ ಆಗುತ್ತಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡುವ ಕೆಲಸ ಅವರ ಟೈಲರಿಂಗ್ ತರಗತಿಯಿಂದ ಆಗಿದೆ ಎನ್ನಲು ಖುಶಿಯಾಗುತ್ತದೆ. ಇಂತಹ ತರಬೇತಿ ಕೇಂದ್ರಗಳು ಮಹಿಳೆಯರ ಏಳಿಗೆಗೆ ಪೂರಕ ಎಂದರು.

ಕುಂಬ್ರ ಮರ್ಕಜುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ನಿರ್ದೇಶಕ ಪಿ.ಎಂ. ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ವಿದ್ಯಾಭ್ಯಾಸ ಇರಲಿಲ್ಲ. ಆದ್ದರಿಂದ ಆ ಕಾಲದಲ್ಲಿ ಮಹಿಳೆಯರು ಎಲ್ಲಾ ವಿಚಾರದಲ್ಲೂ ಹಿಂದೆ ಉಳಿದಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ವಿದ್ಯಾವಂತರಾಗಿದ್ದಾರೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಕೆಲಸವಾಗಬೇಕು. ಕಲಿಕೆಯಿಂದ ಗಳಿಕೆ ಮಾಡುವ ಕೆಲಸ ಎಲ್ಲರಿಂದಲೂ ಆಗಲಿ ಎಂದರು.

ಭಾರತ್ ವೆಹಿಕಲ್ ಬಝಾರ್ ನ ಮಾಲಕ ಅಶ್ರಫ್ ಭಾರತ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಸ್ವಿಂಗ್ ಸೊಲ್ಯೂಶನ್ ಮಾಲಕ ಜಿತೇಂದ್ರ, ಕೊಡಾಜೆ ಬದ್ರಿಯಾ ಜುಮಾ‌ ಮಸೀದಿಯ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಮಂಗಳೂರಿನ ಸ್ವಿಂಗ್ ಸೊಲ್ಯೂಶನ್ ನ‌ ವೆಂಕಟೇಶ್, ಪತ್ರಕರ್ತರಾದ ಯೂಸೂಫ್ ರೆಂಜಲಾಡಿ,  ಎಸ್.ಐ.ಆರ್.ಡಿ.ಪಿ.ಯ ಸಂಪನ್ಮೂಲ ವ್ಯಕ್ತಿ ವಿನಯಾ ವಸಂತ್, ವಿಟ್ಲ ನಾಲೆಡ್ಜ್ ಹಬ್ ಮುಖ್ಯಸ್ಥರಾದ ಮಾಸಿತಾ ಮಹಮ್ಮದ್ ಅಲಿ, ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಆಂಬ್ರೋಯ್ಡರಿ ಸಂಸ್ಥೆಯ ಮುಖ್ಯಸ್ಥರಾದ ತಾಹಿರಾ ಅಶ್ರಫ್ , ಹೆಚ್.ಡಿ.ಬಿ. ಪುತ್ತೂರು ಶಾಖಾ ಸಿಬ್ಬಂದಿ ವಿನೋದ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಅಂಬ್ರೊಯ್ಡರಿ ಸಂಸ್ಥೆಯ ಮುಖ್ಯಸ್ಥರಾದ ತಾಹಿರಾ ಅಶ್ರಫ್ ರವರನ್ನು ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು‌. ಸಂಸ್ಥೆಯ ವಿದ್ಯಾರ್ಥಿನಿ ವಂದನಾ ಪ್ರಿಯ ಅನಿಸಿಕೆ ವ್ಯಕ್ತಪಡಿಸಿದರು.

ಭಾರತ್ ವೆಹಿಕಲ್ ಬಝಾರ್ ಮಾಲಕರಾದ ಅಶ್ರಫ್ ಸ್ವಾಗತಿಸಿದರು. ಪತ್ರಕರ್ತ  ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಭಾರತ್ ವೆಹಿಕಲ್ ಬಝಾರ್ ನ ಸಿಬ್ಬಂದಿಗಳಾದ ಆಸೀಫ್ ಕಲ್ಲಡ್ಕ, ಶರೀಫ್ ಬದನಾಜೆ, ರಿಯಾಜ್ ಬಡಾಜ, ರಫೀಕ್ ಪಂತಡ್ಕ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…