tamanvi
ಶಿಕ್ಷಣ

ಅಂಬಿಕಾ ಯಕ್ಷಕಲಾ ವೃಂದದ ವಾರ್ಷಿಕೋತ್ಸವ | ನೆರೆದವರ ಮನಸೆಳೆದ ಪುಟಾಣಿ ಮಕ್ಕಳ ಯಕ್ಷ ವೈಭವ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಯಕ್ಷಗಾನ ತಂಡ ‘ಅಂಬಿಕಾ ಯಕ್ಷಕಲಾ ವೃಂದ’ದ ಯಕ್ಷಗಾನ ವಾರ್ಷಿಕೋತ್ಸವ ಸೋಮವಾರ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಿತು.

ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ನಿರ್ದೇಶನದಲ್ಲಿ ಅಂಬಿಕಾ ಸಂಸ್ಥೆಯ ಉಪನ್ಯಾಸಕ ಸತೀಶ್ ಇರ್ದೆ ಅವರ ಸಂಯೋಜನೆಯಲ್ಲಿ ಮೂಡಿಬಂದ ಈ ಯಕ್ಷಕಲಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಒಟ್ಟು 32 ಮಂದಿ ವಿದ್ಯಾರ್ಥಿಗಳಿಂದ ಗುರುದಕ್ಷಿಣೆ – ಏಕಲವ್ಯ – ಶಾಂಭವಿ ವಿಲಾಸ ಪ್ರಸಂಗಗಳು ಪ್ರಸ್ತುತಗೊಂಡವು.

ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಯೋಗೀಶ್ ಕಡಂಬಳಿತ್ತಾಯ, ಚೆಂಡೆ ಹಾಗೂ ಮದ್ದಳೆ ವಾದನದಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಪ್ರಮೋದ್ ಪಾಣಾಜೆ, ಅದ್ವೈತ ಕೃಷ್ಣ ಹಾಗೂ ಶಿಶಿರ್ ಕುಮಾರ್ ಸಹಕರಿಸಿದರೆ, ಚಕ್ರತಾಳವನ್ನು ನಾಗೇಶ್ ಆಚಾರ್ಯ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಧನ್ವಿ, ಸಂಹಿತ್ ಲೋಬೋ, ಅಭಿನವ, ಆದಿತ್ಯ, ಮೋಕ್ಷ್, ಚಾರ್ವಿ, ವಿಷ್ಮಾ, ಸಾತ್ವಿಕ್, ಪರೀಕ್ಷಿತ್, ಅಮೋಘ, ಶ್ರೀಹಾನ್, ಶ್ರೀಯಾನ್, ಆರಾಧ್ಯ ವೈ.ಡಿ., ಪ್ರಚೇತ್, ಅಹನ್ ಕೆ.ಆರ್., ಶಾರ್ವಿ, ದೃಷಾನ ಸುರುಳಿ, ಭಾರ್ಗವ್, ಹೇಮಂತ್, ದೈವಿಕ್, ಐಶಿನಿ, ವಾತ್ಸಲ್ಯ, ಸಮರ್ಥ್, ಶ್ರೀಯಂ, ಮನೀಷಾ, ಪ್ರಾಪ್ತಿ, ಶಶಾಂಕ್, ಆರಾಧ್ಯ, ಪ್ರಖ್ಯಾತ್, ರಿಷಾನ್, ಶ್ರೀವತ್ಸ ಹಾಗೂ ಯಶಸ್ ಭಾಗವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…