ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿನಲ್ಲಿ ಯೋಗ ಹಾಗೂ ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳದಿದ್ದರೆ ಸ್ವಾಸ್ಥ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಸಿಕೊಳ್ಳುವುದು ಕಷ್ಟ ಸಾಧ್ಯ. ಹಾಗಾಗಿ ಪಠ್ಯ ಶಿಕ್ಷಣದೊಂದಿಗೆ ಯೋಗ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವುದು ಅಗತ್ಯ. ಯಾಕೆಂದರೆ ಯೋಗದ ಜತೆ ದೊರಕುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಯೋಗ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಹೊಸದಾಗಿ ಸಂಸ್ಥೆಗೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಸುದರ್ಶನ ಕ್ರಿಯೆಯ ತರಬೇತಿ ನೀಡುವುದು ಹಾಗೂ ತದನಂತರ ಯೋಗದ ಜೊತೆಗೆ ದೈನಂದಿನ ಪಠ್ಯ ಶಿಕ್ಷಣದ ಪ್ರಾರಂಭ ಮಾಡುವುದು ಅಂಬಿಕಾ ಸಂಸ್ಥೆಯಲ್ಲಿ ನಡೆದುಬಂದಿದೆ. ಪಠ್ಯದ ಜೊತೆಗೆ ಯೋಗವನ್ನೂ ವಿದ್ಯಾಥಿಗಳಿಗೆ ಕಲಿಸಿಕೊಡುವ ಶಿಕ್ಷಣವನ್ನು ಪ್ರಾರಂಭಿಸಿದ್ದು ಅಂಬಿಕಾದ ಪ್ರಥಮಗಳಲ್ಲಿ ಒಂದಾಗಿದೆ ಎಂದು ನುಡಿದರು.
ಆರ್ಟ್ ಆಫ್ ಲಿವಿಂಗ್ನ ಜಿಲ್ಲಾ ಸಂಚಾಲಕಿ ದೀಪಿಕಾ ಹಾಗೂ ಹಿರಿಯ ಅನುಭವಿ ಶಿಕ್ಷಕಿ ಆಶಾ ರವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಸ್ವಾಸ್ಥ್ಯ ಹಾಗೂ ಮಾನಸಿಕ ನೆಮ್ಮದಿಗಾಗಿ ಯೋಗ ಅಗತ್ಯ: ಸುಬ್ರಮಣ್ಯ ನಟ್ಟೋಜ | ನೆಲ್ಲಿಕಟ್ಟೆ ಅಂಬಿಕಾ ಪ.ಪೂ. ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ
What's your reaction?
- 494c
- 494cc
- 4ai technology
- 4ajjavara
- 4alwas
- 4apology
- 4artificial intelegence
- 4avg
- 4belthangady-provocative-speech-case-conviction
- 4bihar minister
- 4bjp
- 3bjp leader
- 3bjp national president
- 3bt ranjan
- 3co-operative
- 3coastal
- 3Court convicts accused in provocative speech case
- 3crime
- 3crime news
- 3cyclothon
- 3darmasthala
- 3death news
- 3dust bin
- 3education
- 3fraud
- 3gl
- 3gods own country
- 3gold
- 2google for education
- 2independence
- 2jewel
- 2jewellers
- 2jnana vikasa
- 2karnataka state
- 2kerala village
- 2kukke - kollur temple
- 2lokayuktha
- 2lokayuktha raid
- 2Mangalore
- 2manipal
- 2minister krishna bairegowda
- 2mla ashok rai
- 2mohan alwa
- 2mudubidre
- 2nidana news
- 1nirvathu mukku
- 1nitin nabin
- 1police
- 1ptr tahasildar
- 1puttur
- 1puttur news
- 1puttur tahasildar
- 1republic
- 1revenue
- 1revenue department
- 1revenue minister
- 1school
- 1senior citizen
- 1silver
- 1society
- 1sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ | ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ನೀಡುವ ಗೌರವ: ಆದರ್ಶ ಗೋಖಲೆ
ಪುತ್ತೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶೇಷವಾದ ಸ್ಥಾನವಿದೆ. ಗುರುವಿನ ಮಾರ್ಗದರ್ಶನದ…
ಬೆಥನಿ ಶಾಲೆಯ ಬಾಲಕಿಯರಿಗೆ ಕಬಡ್ಡಿಯಲ್ಲಿ ತಾಲೂಕು ಮಟ್ಟಕ್ಕೆ ಮುನ್ನಡೆ
ಪುತ್ತೂರು: ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಂತ ವಿಕ್ಟರ್ ಬಾಲಕಿಯರ…
ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಕುಮಾರವ್ಯಾಸ ಕಾವ್ಯ ಗಮಕ ವಾಚನ
ಬೆಳಾಲು: ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಸೆ.11ರಂದು ಕುಮಾರವ್ಯಾಸ ಕವಿಯ ಕರ್ಣಾಟ ಭಾರತ…
ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…
ಸೆ.14-16: ವಿವೇಕಾನಂದ ಕಾಲೇಜಿನಲ್ಲಿ 45ನೇ ವರ್ಷದ ಗಣೇಶೋತ್ಸವ ಸಂಭ್ರಮ
ಪುತ್ತೂರು: ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ 45ನೇ ವರ್ಷದ…
ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ
ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…
ಬೆಟ್ಟಂಪಾಡಿಯಲ್ಲಿ ಸೆ.19ರಂದು 21ನೇ ಸರಣಿಯ ‘ಗ್ರಾಮ ಸಾಹಿತ್ಯ ಸಂಭ್ರಮ’
ಪುತ್ತೂರು: ಕನ್ನಡ ಸಾಹಿತ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಹಾಗೂ ಗ್ರಾಮೀಣ…
ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ
ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…
ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ
ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…
ಬಪ್ಪಳಿಗೆಯ ಅಂಬಿಕಾ ಪ.ಪೂ. ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ…

















