tamanvi
ಶಿಕ್ಷಣ

ಪುತ್ತೂರು ಅಕ್ಷಯ ಕಾಲೇಜಿನಲ್ಲಿ “WORKPLACE ETHIQUETTE”  ಕಾರ್ಯಾಗಾರ:

ಅಕ್ಷಯ ಕಾಲೇಜಿನಲ್ಲಿ  ವಾಣಿಜ್ಯ ವಿಭಾಗ ದ ಇನ್ವಿಕ್ತಾ  ಕಾಮರ್ಸ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ ಕೆಲಸ   ಸ್ಥಳದ  ಶಿಷ್ಟಾಚಾರ ಎಂಬ ವಿಷಯದಲ್ಲಿ ಕಾರ್ಯಾಗಾರದ   ಸಂಪನ್ಮೂಲ ವ್ಯಕ್ತಿಯಾಗಿ  ಕುಮಾರಿ  ಅಕ್ಷತ ಕೆ  ಹಣಕಾಸು ವಿಶ್ಲೇಷಕರು ನೋವಿಗೋ  ಐ. ಟಿ  ಸಂಸ್ಥೆ ಮಂಗಳೂರು  ಇವರು  ಭಾಗವಹಿಸಿದರು.  

ಈ ಸುದ್ದಿಯನ್ನು ಶೇರ್ ಮಾಡಿ

ಅಕ್ಷಯ ಕಾಲೇಜಿನಲ್ಲಿ  ವಾಣಿಜ್ಯ ವಿಭಾಗ ದ ಇನ್ವಿಕ್ತಾ  ಕಾಮರ್ಸ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ ಕೆಲಸ   ಸ್ಥಳದ  ಶಿಷ್ಟಾಚಾರ ಎಂಬ ವಿಷಯದಲ್ಲಿ ಕಾರ್ಯಾಗಾರದ   ಸಂಪನ್ಮೂಲ ವ್ಯಕ್ತಿಯಾಗಿ  ಕುಮಾರಿ  ಅಕ್ಷತ ಕೆ  ಹಣಕಾಸು ವಿಶ್ಲೇಷಕರು ನೋವಿಗೋ  ಐ. ಟಿ  ಸಂಸ್ಥೆ ಮಂಗಳೂರು  ಇವರು  ಭಾಗವಹಿಸಿದರು.  

 ಕೆಲಸ   ಸ್ಥಳದ  ಶಿಷ್ಟಾಚಾರವು ಒಂದು ನಿರ್ದಿಷ್ಟ ವ್ಯವಹಾರದಲ್ಲಿ ಉದ್ಯೋಗಿಗಳಿಂದ ನಿರೀಕ್ಷಿಸಲಾಗುವ ಮಾತು ಮತ್ತು ನಡವಳಿಕೆಯಾಗಿದೆ.  ಉದ್ಯೋಗಿಗಳು ,ಮಾಲೀಕರು  ಮತ್ತು ಗ್ರಾಹಕರ ಮಧ್ಯೆ ಉತ್ತಮ  ಬಾಂಧವ್ಯ  ಅತೀ  ಅಗತ್ಯ.  ವಿಭಿನ್ನ ಸಂಸ್ಥೆಗಳಲ್ಲಿ  ಸಂಸ್ಥೆಗಳ ಸ್ವರೂಪ ಮತ್ತು  ಕಾರ್ಯ ಕ್ಷೇತ್ರದ  ವ್ಯಾಪ್ತಿಯಲ್ಲಿ ಹೊಂದಾಣಿಕೆಗಳು ಬದಲಾಗಬಹುದಾದರೂ, ಹೆಚ್ಚಿನ ಕೆಲಸದ ಸ್ಥಳದ ಶಿಷ್ಟಾಚಾರ ಹಲವು ಮಾನದಂಡಗಳನ್ನು ಒಳಗೊಂಡಿವೆ. ಉದ್ಯೋಗಿಗಳು ತಮ್ಮ  ಕರ್ತವ್ಯದ  ಸಮಯದಲ್ಲಿ ಏನು ಧರಿಸಬೇಕು (ಡ್ರೆಸ್ ಕೋಡ್), ನಾಯಕರು, ಗ್ರಾಹಕರು ಮತ್ತು ಸಹೋದ್ಯೋಗಿಗಳೊಂದಿಗೆ ಹೇಗೆ ಸಂವಹನ ನಡೆಸಬೇಕು, ಕೆಲಸಕ್ಕೆ ಯಾವಾಗ ಬರಬೇಕು ಮತ್ತು ಹೊರಡಬೇಕು ಸಮಯದ  ಪರಿಪಾಲನೆ , ವೃತ್ತಿಪರ ನಡವಳಿಕೆಗೆ ಸಂಬಂಧಿಸಿದ ಇತರ ನಿಯಮಗಳನ್ನು  ಸಾಮಾನ್ಯವಾಗಿ  ಎಲ್ಲಾ ಸಂಸ್ಥೆಗಳು  ಅನುಸರಿಸುತ್ತಿದೆ.  ವಿದ್ಯಾರ್ಥಿಗಳು  ಮುಂದಿನ  ವ್ಯವಹಾರ  ಕ್ಷೇತ್ರಗಳಲ್ಲಿ ಕೆಲಸದ ಸ್ಥಳದ ಶಿಷ್ಟಾಚಾರ ಗಳನ್ನು  ಸಮರ್ಪಕವಾಗಿ  ನಿರ್ವಹಣೆ ಮಾಡಬೇಕು  ಎಂದು  ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು. 

ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸಂಪತ್ ಕೆ ಪಕ್ಕಳ ರವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ  ಮುಂದಿನ  ಉದ್ಯೋಗ  ಕ್ಷೇತ್ರಗಳಲ್ಲಿ   ವಿಪುಲವಾದ  ಅವಕಾಶಗಳು ತಮ್ಮ ಕರ್ತವ್ಯ ಮತ್ತು  ವ್ಯವಹಾರದ ಶಿಷ್ಟಾಚಾರ ಗಳನ್ನು  ಒಳಗೊಂಡಿದೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು  ಶಿಸ್ತು, ಸಮಯ ಪ್ರಜ್ಞೆ ಹಾಗೂ  ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಗೊಳ್ಳಬೇಕು  ಎಂದು ಸಲಹೆ ನೀಡಿದರು.  

ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಸಂಯೋಜಕರಾದ  ಕುಮಾರಿ  ಮೇಘಶ್ರೀ  ಪ್ರಾಸ್ತಾವಿಕವಾಗಿ ಮಾತನಾಡಿದರು.  ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ ,  ಉಪಪ್ರಾಂಶುಪಾಲರಾದ ರಕ್ಷಣ್  ಟಿ ಆರ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಕಿಶೋರ್ ಕುಮಾರ್ ರೈ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಕು. ಟೀನಾ ಸ್ವಾಗತಿಸಿ, ಕು. ಅಂಜಲಿ ವಂದಿಸಿ, ಕು.ಸವಿ ದೇಚಮ್ಮ  ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…