tamanvi
ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ ಮಾಹಿತಿ ಕಾರ್ಯಕ್ರಮ

ಇಲ್ಲಿನ ಅಕ್ಷಯ ಕಾಲೇಜು ರಾಷ್ಟ್ರೀಯ  ಸೇವಾ ಯೋಜನೆ ಮತ್ತು ಡಾ  ಕೆ ಶಿವರಾಮ ಕಾರಂತ ಸರಕಾರಿ  ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇದರ ಸಹಯೋಗದಲ್ಲಿ,  ಸಮಾಜ ಕಾರ್ಯ ವಿಭಾಗ ಮತ್ತು ಪ್ರಜ್ಞಾಶ್ರಮ ಬೌದ್ಧಿಕ  ದಿವ್ಯಾಂಗರ ವಸತಿಯುಕ್ತ ಕೇಂದ್ರ ಬೀರಮಲೆ ಬೆಟ್ಟ ಪುತ್ತೂರು ಇವುಗಳ ಸಯುಕ್ತ ಆಶ್ರಯದಲ್ಲಿ "ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ" ಕಾರ್ಯಕ್ರಮ ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:  ಇಲ್ಲಿನ ಅಕ್ಷಯ ಕಾಲೇಜು ರಾಷ್ಟ್ರೀಯ  ಸೇವಾ ಯೋಜನೆ ಮತ್ತು ಡಾ  ಕೆ ಶಿವರಾಮ ಕಾರಂತ ಸರಕಾರಿ  ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇದರ ಸಹಯೋಗದಲ್ಲಿ,  ಸಮಾಜ ಕಾರ್ಯ ವಿಭಾಗ ಮತ್ತು ಪ್ರಜ್ಞಾಶ್ರಮ ಬೌದ್ಧಿಕ  ದಿವ್ಯಾಂಗರ ವಸತಿಯುಕ್ತ ಕೇಂದ್ರ ಬೀರಮಲೆ ಬೆಟ್ಟ ಪುತ್ತೂರು ಇವುಗಳ ಸಯುಕ್ತ ಆಶ್ರಯದಲ್ಲಿ “ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ” ಕಾರ್ಯಕ್ರಮ ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು

ವಿಶೇಷ ಚೇತನರ ವಿವಿದ್ದುದೇಶ ಪುನರ್ವಸತಿ ಪುತ್ತೂರು ತಾಲೂಕು ಇಲ್ಲಿಯ ಕಾರ್ಯಕರ್ತ ನವೀನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಬೀಳುವ ಒತ್ತಡ ಮತ್ತು ಮಾನಸಿಕ ಖಿನ್ನತೆಯ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ  ಮಾಹಿತಿ ನೀಡಿದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಮಾನಸಿಕ ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ದೈವದೇವರ ಮೇಲಿಡುವ ನಂಬಿಕೆಯೂ ಫಲಕಾರಿಯಾಗಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಕಾರಿಗಳಾದ ಕಿಶೋರ್ ಕುಮಾರ್ ರೈ ಮತ್ತು ಮೇಘಶ್ರೀ ಉಪಸ್ಥಿತರಿದ್ದರು.ಡಾI ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇಲ್ಲಿಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರೀಶ್ ಸಿ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಾದ ಅಶೋಕ್ ಸ್ವಾಗತಿಸಿ, ಲಿಖಿನ್ ವಂದಿಸಿದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿ ಕೀರ್ತನ್ ಕೃಷ್ಣ ಪ್ರಾರ್ಥಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

 


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…