ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಮಿನಿಪದವು ಶ್ರೀ ಅಯ್ಯಪ್ಪ ಭಕ್ತವೃಂದದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಬಗ್ಗೆ:
ಸುಮಾರು 47 ವರ್ಷಗಳ ಹಿಂದೆ ಮಿನಿಪದವಿನಲ್ಲಿ ಅಯ್ಯಪ್ಪ ಭಜನಾ ಮಂದಿರವನ್ನು ಅನಂತ ನಾಯ್ಕ ಹಾಗೂ ಊರವರು ಸ್ಥಾಪಿಸಿದರು. ವರ್ಷದಲ್ಲಿ ಒಂದು ಬಾರಿ ಮಕರ ಸಂಕ್ರಮಣದ ಸಂದರ್ಭ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಾಲ ಈ ಮಂದಿರದಲ್ಲಿ ವಾಸ್ತವ್ಯವಿದ್ದು, ಶರಣುಘೋಷ, ಪಡಿಪೂಜೆ ಹಾಗೂ ಶಬರಿಮಲೆಗೆ ಹೋಗುವ ದಿನ ಗಣಪತಿ ಹೋಮ, ಅಯ್ಯಪ್ಪ ಪೂಜೆ, ಪಡಿಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದವು. ಕಾಲಾಂತರದಲ್ಲಿ ಈ ಕಾರ್ಯಕ್ರಮಗಳು ನಿಂತು ಹೋಗುವಂತಾಯಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಗುಡಿಯ ಎದುರು ಭಾಗದ ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಅಪಘಾತಕ್ಕೆ ಒಳಗಾಗುವುದು ಹೆಚ್ಚತೊಡಗಿತು. ವಾಹನ ಸವಾರರು ಹಾಗೂ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಮನೆಯವರು ಭಯಬೀತರಾದರು. ಕಾರಣ ಏನೆಂದು ಜ್ಯೋತಿಷ್ಯ ಮುಖೇನ ತಿಳಿದಾಗ, ಮುಂಚಿನಿಂದಲೂ ನಡೆದುಕೊಂಡು ಬರುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯದಿ ಅನ್ನದಾನ ಸೇವೆಗಳು ನಿಂತು ಹೋಗಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂತು. ಆ ನಂತರದಲ್ಲಿ ಊರವರನ್ನು ಒಟ್ಟು ಸೇರಿಕೊಂಡು ವರ್ಷಪೂರ್ತಿ ಆಗಾಗ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ತದನಂತರ ಯಾವುದೇ ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿಲ್ಲ.
ಬಳಿಕ ಸ್ಥಳೀಯರು ಸೇರಿಕೊಂಡು ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಮಿನಿಪದವು ಎಂಬ ಹೆಸರಿನಲ್ಲಿ ರಿಜಿಸ್ಟರ್ಡ್ ಬಾಡಿಯನ್ನು ಸ್ಥಾಪಿಸಿ, 2024ರ ಜನವರಿಯಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ.
ಮಿನಿಪದವು: ಮಾ. 23ರಂದು ಶ್ರೀ ಅಯ್ಯಪ್ಪ ಸಾನಿಧ್ಯದಲ್ಲಿ ಗುಳಿಗ ದೈವದ ನೇಮೋತ್ಸವ
What's your reaction?
- 2094c
- 1994cc
- 19ai technology
- 19ajjavara
- 18alwas
- 18apology
- 18artificial intelegence
- 18avg
- 17belthangady-provocative-speech-case-conviction
- 17bihar minister
- 17bjp
- 17bjp leader
- 16bjp national president
- 16bt ranjan
- 16co-operative
- 15coastal
- 15Court convicts accused in provocative speech case
- 15crime
- 15crime news
- 14cyclothon
- 14darmasthala
- 14death news
- 13dust bin
- 13education
- 13fraud
- 13gl
- 12gods own country
- 12gold
- 12google for education
- 11independence
- 11jewel
- 11jewellers
- 11jnana vikasa
- 10karnataka state
- 10Kedila
- 10kerala village
- 10kukke - kollur temple
- 9lokayuktha
- 9lokayuktha raid
- 9Mangalore
- 8manipal
- 8minister krishna bairegowda
- 8mla ashok rai
- 8mohan alwa
- 7mudubidre
- 7nidana news
- 7nirvathu mukku
- 6nitin nabin
- 6police
- 6ptr tahasildar
- 6puttur
- 5puttur news
- 5puttur tahasildar
- 5republic
- 4revenue
- 4revenue department
- 4revenue minister
- 4school
- 3senior citizen
- 3silver
- 3society
- 3sowmya
- 2students
- 2tahasildar
- 2tahasildar absconded
- 1teachers
- 1tour
- 1trending
- 1udupi
- 0wastage
Related Posts
ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು
ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…
ಅ. 21ರಂದು ಸಂಜೆ ಪುತ್ತೂರು ದಸರಾ (ಶಾರದೋತ್ಸವ)ದ ಅದ್ಧೂರಿ ಮೆರವಣಿಗೆ | ಕೇರಳ, ತಮಿಳುನಾಡು, ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿರುವ ಶ್ರೀ ಶಾರದಾ ಭಜನಾ…
‘ದಸರಾ ಕೇವಲ ಆಚರಣೆಯಲ್ಲ; ಸಮಾಜದ ಒಗ್ಗಟ್ಟಿನ ಸಂಕೇತ’ | ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾದಲ್ಲಿ ಸಿಎಂ ಡಿ ಕೆ ಶಿವಕುಮಾರ್
ಮಂಗಳೂರು: "ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ದಸರಾ ಭಕ್ತವೈಭವದ…
ಕುದ್ರೋಳಿ: ಶಾರದಾ ಮಾತೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ | ಮಂಗಳೂರು ದಸರಾದಲ್ಲಿ ಹಲವು ವಿಶೇಷತೆ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಭಕ್ತಿಪೂರ್ಣ ಮಂತ್ರಘೋಷಗಳು, ಸಾಂಪ್ರದಾಯಿಕ ಸಂಗೀತ ಮತ್ತು ವರ್ಣರಂಜಿತ ಸಾಂಸ್ಕೃತಿಕ…
ವೆಂಕಟಾದ್ರಿ ಮೊಬೈಲ್ ಆ್ಯಪ್ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಅಧಿಕೃತ ಲೋಕಾರ್ಪಣೆ! ಆಫ್’ಲೈನ್’ನಲ್ಲಿಯೂ ಬಳಸಬಹುದಾದ ಈ ಆ್ಯಪ್’ನಲ್ಲಿದೆ ai ವಾಯ್ಸ್ ಅಸಿಸ್ಟೆಂಟ್
ತಿರುಪತಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಅನುಕೂಲದ ದೃಷ್ಟಿಯಿಂದ ‘ವೆಂಕಟಾದ್ರಿ” (Venkatadri)…
ಮಹಾಲಿಂಗೇಶ್ವರ ದೇವರಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಂದ ಸ್ವರ್ಣ ಸಮರ್ಪಣೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ…
ಧರ್ಮಾಭ್ಯುದಯ – ಧರ್ಮ ಶಿಕ್ಷಣ ತಾಲೂಕು ಸಮಿತಿಯಿಂದ ಶೃಂಗೇರಿಗೆ ಭೇಟಿ
ಪುತ್ತೂರು: ತಾಲೂಕು ಧರ್ಮಾಭ್ಯುದಯ - ಧರ್ಮ ಶಿಕ್ಷಣ ಸಮಿತಿ ವತಿಯಿಂದ ಶೃಂಗೇರಿ ಶ್ರೀ ಶಾರದಾಂಬಾ…
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ಹಿನ್ನೆಲೆಯಲ್ಲಿ ದೂರು: ಅ. 16ರಂದು ವಿಚಾರಣೆ
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನೀಡಿರುವ ದೂರುಗಳ…
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…
‘ಹತ್ತೂರ ಒಡೆಯ, ಪುತ್ತೂರ ಮುತ್ತು’ ಸನ್ನಿಧಿಗೆ ಸಿ.ಟಿ. ರವಿ ಭೇಟಿ
ಪುತ್ತೂರು, ಆ.7:ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ…

















