ಧಾರ್ಮಿಕ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆದ ಸಾಮೂಹಿಕ ಸರಸ್ವತಿ ವಂದನೆ

Avg

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ​ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ (ಪುತ್ತೂರು ತಾಲೂಕು ಮತ್ತು ಗ್ರಾಮಾಂತರ) ಮತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಯೋಜಕತ್ವದಲ್ಲಿ,ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಸಾಮೂಹಿಕ ಸರಸ್ವತೀ ವಂದನೆ ಮತ್ತು ವಿದ್ಯಾ ಸಂಕಲ್ಪ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.

maithri

veda

ಬೆಳಿಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೇಶವ ಪ್ರಸಾದ ಮುಳಿಯ ಹವನದ ಸಂಕಲ್ಪ ನೆರವೇರಿಸಿದರು. ಜಯರಾಮ ಜೋಯಿಸ್ ಮತ್ತು ತಂಡ ಸರಸ್ವತೀ ಸೂಕ್ತ ಹವನ ನಡೆಸಿಕೊಟ್ಟರು.

ದೇವಾಲಯಗಳ ಸಂವರ್ಧನಾ ಸಮಿತಿಯ ಮಂಗಳೂರು ವಿಭಾಗದ ವಿಭಾಗ ಪ್ರಮುಖ್ ಕೇಶವ್ ಪ್ರಸಾದ್ ಮುಳಿಯ ಅವರು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದ ಪ್ರತಿಜ್ಞಾ ಪೂರ್ವಕ ಸಂಕಲ್ಪವನ್ನು ಭೋದಿಸಿದರು.

ಪೂರ್ಣಾಹುತಿ ಸಂದರ್ಭದಲ್ಲಿ ಸುಭಾಷ್ ರೈ ಬೆಳ್ಳಿಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ರವೀಂದ್ರನಾಥ್ ರೈ, ರಾಮ್ ದಾಸ್ ಗೌಡ , ರಾಧಾಕೃಷ್ಣ ನಂದಿಲ, ಕೃಷ್ಣಕುಮಾರ್ ಅತ್ರಿಜಾಲು, ಸಂಪತ್ ಕುಮಾರ್, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಯೋಜಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಧಾರ್ಮಿಕ ಶಿಕ್ಷಣ ಕೇಂದ್ರದ ಬೋಧಕರಾದ ವಿ.ಪ್ರಭಾವತಿ, ಸುಧಾ ಹೆಬ್ಬಾರ್, ಚಂದ್ರಪ್ರಭಾ, ಶಂಕರಿ ಶರ್ಮ, ವಿಜಯ ಸರಸ್ವತಿ, ಸುಮಂಗಲ, ಕವಿತಾ ಕೊಳತ್ತಾಯ, ವತ್ಸಲ ರಾಜ್ಞಿ, ವೀಣಾ ಬಿ.ಕೆ, ತೇಜಸ್ವಿ, ಪ್ರಶಾಂತ್ ದೊಡ್ಡಡ್ಕ ಹಾಗೂ ನಿತ್ಯಕರಸೇವಕರ ಅಧ್ಯಕ್ಷ ವಾದಿರಾಜ್ ಮತ್ತು ತಂಡದವರು ಭಾಗವಹಿಸಿದ್ದರು

175 ವಿದ್ಯಾರ್ಥಿಗಳು  ಮೊದಲಿಗೆ ಭಕ್ತಿಪೂರ್ವಕ ಭಜನೆಯೊಂದಿಗೆ, ಸರಸ್ವತಿ ಅಷ್ಟೋತ್ತರ ಪಠಿಸುತ್ತಾ, ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡಿದರು. ಮಂಜುಳಗಿರಿ ವೆಂಕಟರಮಣ ಭಟ್ ಅವರು ಸರಸ್ವತಿ ಅಷ್ಟೋತ್ತರ ಮತ್ತು ಶ್ಲೋಕಗಳನ್ನು ಮಕ್ಕಳಿಗೆ ಬೋಧಿಸಿದರು. ವಿದ್ಯಾರ್ಥಿಗಳ ಜೊತೆಗೆ ಬೋಧಕರು , ಪೋಷಕರು ಹಾಗೂ ಭಕ್ತಾದಿಗಳು ಸೇರಿ ಸುಮಾರು 275 ಮಂದಿ ಭಾಗವಹಿಸಿ, ಭಕ್ತಿ ಪೂರ್ವಕ ಭಜನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ದೇವರ ಆಶೀರ್ವಾದದೊಂದಿಗೆ ಪ್ರಸಾದ ಪುಸ್ತಕ ಹಾಗೂ ಶ್ರೀ ದೇವರ ನಾಮ ಬರೆದಂತಹ ಪೆನ್ನನ್ನು ವಿತರಿಸಲಾಯಿತು.

“ಅಧಿಕಮಾಸದಲ್ಲಿ ನಡೆದಂತಹ ವಿದ್ಯೆ, ಭಕ್ತಿ ಮತ್ತು ಸಂಸ್ಕಾರದ ಸಂಗಮವಾದ ಸಾಮೂಹಿಕ ಸರಸ್ವತಿ ವಂದನೆ ಕಾರ್ಯಕ್ರಮವು ಅಧಿಕ ಫಲವನ್ನು ಅನುಗ್ರಹಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ ಕೋರ್ಟ್ ರಸ್ತೆ , ಅಟಲ್ ಉದ್ಯಾನ ಕೊಂಬೆಟ್ಟು , ಮಾಸ್ಟರ್ ಪ್ಲಾನರಿ ಕಲ್ಲೇಗ , ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾ ವಿಷ್ಣು ದೇವಸ್ಥಾನ ಕೆಮ್ಮಿಂಜೆ, ಶ್ರೀ ರಾಘವೇಂದ್ರ ಮಠ ಕಲ್ಲಾರೆ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ಹಿಂದೂ ಧಾರ್ಮಿಕ ಶಿಕ್ಷಣ ಕಚೇರಿಯ ಮೊಬೈಲ್ ಸಂಖ್ಯೆ 9035888916ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜೂನ್ 7ರಂದು ಸಾಮೂಹಿಕ ಸರಸ್ವತೀ ವಂದನೆ, ವಿದ್ಯಾ ಸಂಕಲ್ಪ | ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕರೆ

ಪುತ್ತೂರು: ಪ್ರಸ್ತುತ ವರ್ಷದ ಶಾಲಾ ಹಾಗೂ ಕಾಲೇಜುಗಳ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ…