tamanvi
ಕರಾವಳಿ

ವಿಶೇಷಚೇತನರಿಗೆ ಬಾರದ ಮಾಸಾಶನ, ಮಾನದಂಡ ಸಡಿಲಿಸಿ – ಸರಕಾರಕ್ಕೆ ಮನವಿ ಮಾಡಿದ ಸಕ್ಷಮ ದ.ಕ. ಜಿಲ್ಲಾ ಘಟಕ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಕಳೆದ ಐದು ತಿಂಗಳಿಂದ ಕರ್ನಾಟಕ ರಾಜ್ಯದಲ್ಲಿರುವ ಸಾವಿರಾರು ದಿವ್ಯಾಂಗರಿಗೆ ಅರ್ಹವಾಗಿ ದೊರಕಬೇಕಾಗಿದ್ದ ಸರಕಾರದ ಪಿಂಚಣಿ/ಮಾಸಾಶನ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ, ದಿವ್ಯಾಂಗರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ದಿವ್ಯಾಂಗರಾಗಿರುವುದೇ ಮಾನದಂಡವಾಗಿದ್ದು, ಇದಕ್ಕೆ ಮತ್ತಷ್ಟು ಕಟ್ಟುಪಾಡುಗಳನ್ನು ವಿಧಿಸಬಾರದು ಎಂದು ವಿಶೇಷಚೇತನರ ಪರವಾಗಿ ಕೆಲಸ ಮಾಡುವ ಸಕ್ಷಮ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ರಾಜಶೇಖರ್ ಭಟ್ ಕಾಕುಂಜೆ ಆಗ್ರಹಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ವೈಕಲ್ಯ ಹೊಂದಿದ ಮಕ್ಕಳನ್ನು ಹೊಂದಿದವರಿಗೆ ಸರಕಾರ ನೀಡುವ ಸಣ್ಣ ಮೊತ್ತವೂ ದೊಡ್ಡದೇ ಆಗುತ್ತದೆ. ಉತ್ತಮ ಭವಿಷ್ಯಕ್ಕೆ ಸೇತುವಾಗುತ್ತದೆ. ಆದರೆ ಈಗಲೂ ವಾರ್ಷಿಕ ಆದಾಯ ಮಿತಿ 32,000 ಎಂಬ ನಿಯಮವನ್ನು ಬೊಟ್ಟು ಮಾಡಿ, ಸೌಲಭ್ಯಗಳ ನಿರಾಕರಣೆ ಮಾಡುವುದು ಸರಿಯಲ್ಲ. ಇದರಿಂದ ಸಾವಿರಾರು ದಿವ್ಯಾಂಗರು ವಂಚಿತರಾಗಿದ್ದು, ಸರಕಾರ ಈ ಕುರಿತು ಗಮನಹರಿಸಬೇಕು ಎಂದರು.

ರಾಜ್ಯ ಸರಕಾರ ಕೆಲ ತಿಂಗಳಿಂದ ಮಾಸಾಶನ ನೀಡಲು ವಾರ್ಷಿಕ ಆದಾಯ ಮಿತಿಯನ್ನು ಕಡ್ಡಾಯಗೊಳಿಸಿದ್ದು, ಈ ಕಾರಣದಿಂದ ಹಲವು ದಿವ್ಯಾಂಗರು ವಂಚಿತರಾಗುತ್ತಿದ್ದಾರೆ. ದಿವ್ಯಾಂಗರಾಗಿರುವುದೇ ಮಾಸಾಶನ ನೀಡಲು ಅರ್ಹತೆಯಾಗಿರಬೇಕೇ ವಿನಃ ಕುಟುಂಬದ ಆರ್ಥಿಕ ಕಾರಣದ ನೆಪವೊಡ್ಡಿ ನಿಲ್ಲಿಸಬೇಡಿ ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ರಾಜ್ಯ ಪ್ರಶಸ್ತಿ ದೊರತರೂ ಪಿಂಚಣಿಗೆ ಖೊಕ್:

ವಿಕಲಚೇತನ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ದೊರೆತರೂ ಇದೀಗ ಮಾಸಾಶನಕ್ಕೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕಳೆದ ನಾಲ್ಕು ತಿಂಗಳಿಂದ ಆದಾಯದ ಮಿತಿ ಹೆಚ್ಚಳದ ನೆಪ ಹೇಳಿ ಮಾಶಾಸನ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಸಕ್ಷಮದ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಪ್ರತಿನಿಧಿ ಮತ್ತು ವಿಕಲಚೇತನ ರಾಜ್ಯ ಪ್ರಶಸ್ತಿ ಪುರಸ್ಕೃತೆ ಸುಧಾರತ್ನ ಈ ಸಂದರ್ಭ, ಹೇಳಿದರು.

ಎಲ್ಲಾ ದಿವ್ಯಾಂಗರು ಒಟ್ಟಾಗಿ ಸಭೆ ನಡೆಸಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದೂ ಅಷ್ಟು ಸುಲಭವಲ್ಲ. ಕೆಲವರಿಗೆ ನಡೆಯಲು ಸಾಧ್ಯವಿಲ್ಲ, ಕೆಲವರಿಗೆ ಮಾತನಾಡಲು ಸಾಧ್ಯವಿಲ್ಲ, ಇನ್ನು ಕೆಲವರು ದೃಷ್ಟಿ ಸಮಸ್ಯೆ, ಬೌದ್ಧಿಕ ವೈಕಲ್ಯ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹಕ್ಕಿಗಾಗಿ ಹೋರಾಡುವುದೇ ಅವರಿಗೆ ಸವಾಲಾಗುತ್ತದೆ ಎಂದವರು ಹೇಳಿದರು.

ಜನಪ್ರತಿನಿಧಿಗಳೇ ನಮ್ಮ ಧ್ವನಿಯಾಗಿ:

ವಿಶೇಷಚೇತನ ಮಗುವಿನ ತಂದೆಯಾಗಿರುವ ಸಕ್ಷಮ ಸದಸ್ಯ ಹರೀಶ್ ಮಾಂಬಾಡಿ ಮಾತನಾಡಿ, ವಾರ್ಷಿಕ ಆದಾಯ 32000 ಇರಬೇಕು ಎಂಬ ಆರ್ಥಿಕ ಮಾನದಂಡದಿಂದ ನನ್ನ ಮಗಳು ಮಾಸಾಶನದಿಂದ ವಂಚಿತಳಾಗಿದ್ದಾಳೆ. ನಮ್ಮ ಜನಪ್ರತಿನಿಧಿಗಳು ಈ ಕುರಿತು ಸದನದಲ್ಲಿ ವಿಶೇಷಚೇತನರ ಪರ ಧ್ವನಿ ಎತ್ತಬೇಕು, ಪ್ರತಿಯೊಬ್ಬ ಜನಪ್ರತಿನಿಧಿಯ ಕಚೇರಿಗೆ ವಿಶೇಷಚೇತನರು, ಅವರ ಹೆತ್ತವರು ಬಂದು ಮನವಿ ನೀಡಲು ಕಷ್ಟವಾಗುತ್ತದೆ ಎಂಬ ದೃಷ್ಟಿಯಲ್ಲಿ ಈ ಮೂಲಕ ಗಮನ ಸೆಳೆಯುತ್ತಿದ್ದೇವೆ  ಎಂದು ಮನವಿ ಮಾಡಿದರು.

ಸಕ್ಷಮ ಉಪಾಧ್ಯಕ್ಷ ಗಣೇಶ್ ಭಟ್ ವಾರಣಾಸಿ, ದಿವ್ಯಾಂಗರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಕ್ಷಮ ದಕ್ಷಿಣ ಕನ್ನಡ ಕಾರ್ಯದರ್ಶಿ ಹರೀಶ್ ಪ್ರಭು, ಜಂಟಿ ಕಾರ್ಯದರ್ಶಿ ಭಾಸ್ಕರ ಹೊಸಮನೆ, ಕೋಶಾಧಿಕಾರಿ ಸತೀಶ್ ರಾವ್,  ಮಹಿಳಾ ಆಯಾಮ ಪ್ರಮುಖ್ ಗೀತಾ ಲಕ್ಷ್ಮೀಶ, ಜ್ಯೋತ್ಸ್ನಾ ಅಡಿಗ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…